ನವದೆಹಲಿ: ತಿರುವನಂತಪುರದಲ್ಲಿ ಕೇರಳ ರಾಜ್ಯಪಾಲರ ಕಾರಿನ ಮೇಲೆ ಎಸ್.ಎಫ್.ಐ. ತಂಡ ದಾಳಿ ನಡೆಸಿದ್ದಾರೆ. ರಾಜಭವನದಿಂದ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ದಾಳಿ ವೇಳೆ ಕಾರನ್ನು ನಿಲ್ಲಿಸಿ ಕಾರಿನ ಗಾಜು ಒಡೆಯಲು ಯತ್ನಿಸಿದ್ದಾರೆ.
ಆದರೆ ರಾಜ್ಯಪಾಲರು ವಾಹನ ನಿಲ್ಲಿಸಿ ಹೊರಬಂದು ಇದೇನು ಭದ್ರತೆ ಎಂದು ಪೋಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಎಸ್.ಎಫ್.ಐ. ತಂಡ ತಮ್ಮ ವಿರುದ್ಧ ಭಾರೀ ದಾಳಿಗೆ ಯತ್ನಿಸುತ್ತಿದ್ದಾರೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಪ್ರತಿಭಟನೆಯ ಬಗ್ಗೆ ಪೋಲೀಸರು ಮೊದಲೇ ತಿಳಿದಿದ್ದರೂ ದಾಳಿಕೋರರ ಸಂಚಿಗೆ ಬೆಂಬಲ ನೀಡಿದ್ದಾರೆ ಎಂದು ರಾಜ್ಯಪಾಲರು ಆರೋಪಿಸಿದ್ದಾರೆ. ಈ ದಾಳಿ ಬಗ್ಗೆ ಮುಖ್ಯಮಂತ್ರಿಗೆ ಗೊತ್ತಿದೆ ಎಂದು ಟೀಕಿಸಿದರು.
ತಿರುವನಂತಪುರಂ ಯೂನಿವರ್ಸಿಟಿ ಕಾಲೇಜಿನ ಬಳಿ ಈ ದಾಳಿ ನಡೆದಿದೆ. ರಾಜ್ಯಪಾಲರ ವಾಹನದ ಮುಂದೆ ನುಗ್ಗಿದ ಎಸ್‍ಎಫ್‍ಐ ತಂಡ ಅಯ್ಯಂಗಾಳಿ ಸಭಾಂಗಣದ ಬಳಿ ಇದ್ದ ಪೆÇಲೀಸರನ್ನು ಸುತ್ತುವರಿದು ಹಲ್ಲೆಗೆ ಯತ್ನಿಸಿತು.





