ತಿರುವನಂತಪುರ: ಕೇರಳ-ಲಕ್ಷದ್ವೀಪ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಆದರೆ ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆಗೆ ಯಾವುದೇ ಅಡ್ಡಿ ಇಲ್ಲ. ಡಿಸೆಂಬರ್ 17 ಮತ್ತು 18 ರಂದು ಕೇರಳ-ಲಕ್ಷದ್ವೀಪ ಕರಾವಳಿ ಮತ್ತು ಆಗ್ನೇಯ ಅರೇಬಿಯನ್ ಸಮುದ್ರದ ಪಕ್ಕದಲ್ಲಿ 40-45 ಕಿಮೀ ವೇಗದಲ್ಲಿ ಬಲವಾದ ಗಾಳಿ ಮತ್ತು ಕೆಟ್ಟ ಹವಾಮಾನದ ಸಾಧ್ಯತೆಯಿದೆ.
ವಿಶೇಷ ಮುನ್ನೆಚ್ಚರಿಕೆಗಳು:
ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಶ್ರೀಲಂಕಾ ಕರಾವಳಿ, ತಮಿಳುನಾಡು ಕರಾವಳಿ ಮತ್ತು ಮನ್ನಾರ್ ಕೊಲ್ಲಿ ಪಕ್ಕದ ಕನ್ಯಾಕುಮಾರಿ ಕರಾವಳಿಯಲ್ಲಿ ಇಂದು ಮತ್ತು ನಾಳೆ ಪ್ರಬಲ ಗಾಳಿ ಮತ್ತು ಕೆಟ್ಟ ಹವಾಮಾನದ ಸಾಧ್ಯತೆಯಿದೆ.
ಡಿಸೆಂಬರ್ 17-18 ರಂದು ಶ್ರೀಲಂಕಾ ಕರಾವಳಿಯುದ್ದಕ್ಕೂ ನೈಋತ್ಯ ಬಂಗಾಳ ಕೊಲ್ಲಿ, ತಮಿಳುನಾಡು ಕರಾವಳಿ, ಮನ್ನಾರ್ ಕೊಲ್ಲಿ ಮತ್ತು ಕನ್ಯಾಕುಮಾರಿ ಕರಾವಳಿಯಲ್ಲಿ ಕೆಟ್ಟ ಹವಾಮಾನ ಮತ್ತು ಪ್ರಬಲ ಗಾಳಿ ಬೀಸುವ ಸಾಧ್ಯತೆಯಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಈ ದಿನಾಂಕಗಳಲ್ಲಿ ಮೀನುಗಾರಿಕೆ ನಡೆಸಬಾರದು ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.


