HEALTH TIPS

108 ಆಂಬುಲೆನ್ಸ್‍ನಲ್ಲಿ ಮಗುವಿಗೆ ಜನ್ಮ ನೀಡಿದ ಗೃಹಿಣಿ-ಬಾಣಂತಿ, ಮಗು ಆರೋಗ್ಯ

             ಮಂಜೇಶ್ವರ: ಹೆರಿಗೆ ವೆದನೆಯಿಂದ ಬಳಲುತ್ತಿದ್ದ ಗೃಹಿಣಿ, ಆಸ್ಪತ್ರೆ ಹಾದಿ ಮಧ್ಯೆ 108ಆಂಬುಲೆನ್ಸ್‍ನಲ್ಲಿ ಗಂಡುಮಗುವಿಗೆ ಜನ್ಮನೀಡಿದ್ದಾರೆ. ಮಂಜೇಶ್ವರ ಸನಿಹದ ಮಜೀರ್‍ಪಳ್ಳ ನೀರೊಳಿಕೆ ನಿವಾಸಿ, 32ರ ಹರೆಯದ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಬಾಣಂತಿ ಮತ್ತು ಮಗು ಆರೋಗ್ಯವಂತರಾಗಿದ್ದಾರೆ.

            ಗುರುವಾರ ಬೆಳಗ್ಗೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸಂಬಂಧಿಕರು 108ಆಂಬುಲೆನ್ಸ್‍ಗೆ ಕರೆಮಾಡಿದ್ದರು. ಆಂಬುಲೆನ್ಸ್ ಪೈಲಟ್ ಪ್ರಣವ್ ಪಿ ಹಾಗೂ ಎಮರ್ಜೆನ್ಸೀ ಮೆಡಿಕಲ್ ಟೆಕ್ನಿಶಿಯನ್ ಅನುರೂಪ್ ಎಂ.ಎಸ್ ನೇತೃತ್ವದಲ್ಲಿ ಮಹಿಳೆಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ಹಾದಿಮಧ್ಯೆ ಗರ್ಭಿಣಿ ಮತ್ತಷ್ಟು ಅಸೌಖ್ಯ ಕಾಣಿಸಿಕೊಂಡಿದ್ದು, ಅನುರೂಪ್ ಎಂ.ಎಸ್ ನಡೆಸಿದ ತಪಾಸಣೆ ಹಿನ್ನೆಲೆಯಲ್ಲಿ ಪ್ರಯಾಣ ಮುಂದುವರಿಸುವುದರಿಂದ ತಾಯಿ ಮತ್ತು ಮಗುವಿಗೆ ಅಪಾಯ ಅರಿತು ಆಂಬುಲೆನ್ಸ್‍ನಲ್ಲೇ ಹೆರಿಗೆ ಸೌಕರ್ಯ ಒದಗಿಸಿಕೊಟ್ಟಿದ್ದರು. ನಂತರ 108 ಆಂಬುಲೆನ್ಸ್ ಮೂಲಕ ಬಾಣಂತಿ, ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries