ಕೊಲ್ಲಂ: ರಾಜ್ಯಮಟ್ಟದ ಶಾಲಾ ಕಲೋತ್ಸವದ ಎರಡನೇ ದಿನವೂ ಕಣ್ಣೂರಿನ ಅಬ್ಬರ ಮುಗಿಲುಮುಟ್ಟಿದೆ. ಆತಿಥೇಯರಾದ ಕೊಲ್ಲಂ, ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್ ಸನಿಹದಲ್ಲಿದೆ.
111 ಸ್ಪರ್ಧೆಗಳು ಪೂರ್ಣಗೊಂಡಾಗ ಕಣ್ಣೂರು (410), ಕೊಲ್ಲಂ (396), ಪಾಲಕ್ಕಾಡ್ ಮತ್ತು ಕೋಯಿಕ್ಕೋಡ್ (395) ಅಂಕಗಳನ್ನು ಹೊಂದಿವೆ.
ಜಿಲ್ಲೆಗಳ ನಡುವೆ ಪ್ರಬಲ ಪೈಪೆÇೀಟಿ ಏರ್ಪಟ್ಟಿದೆ. ಬ್ರಾಕೆಟ್‍ನಲ್ಲಿ ಇತರ ಜಿಲ್ಲೆಗಳ ಅಂಕಗಳ ಸ್ಥಿತಿ. ತ್ರಿಶೂರ್ (384), ಎರ್ನಾಕುಳಂ (372), ಮಲಪ್ಪುರಂ (372), ಆಲಪ್ಪುಳ (353), ಕಾಸರಗೋಡು (352), ತಿರುವನಂತಪುರಂ (349), ಕೊಟ್ಟಾಯಂ (344), ವಯನಾಡ್ (327), ಪತ್ತನಂತಿಟ್ಟ (302) ಮತ್ತು ಇಡುಕ್ಕಿ (282).
ಶಾಲಾ ವಿಭಾಗದಲ್ಲಿ ಪಾಲಕ್ಕಾಡ್ ಆಲತ್ತೂರು ಬಿಎಸ್ ಎಸ್ ಗುರುಕುಲಂ ಎಚ್ ಎಸ್ ಎಸ್ 101 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ತಿರುವನಂತಪುರ ಕಾರ್ಮೆಲ್ ಹೈಯರ್ ಸೆಕೆಂಡರಿ ಶಾಲೆ 56 ಅಂಕಗಳೊಂದಿಗೆ ದ್ವಿತೀಯ ಹಾಗೂ ಪತ್ತನಂತಿಟ್ಟ ಕಿಟಂಗನ್ನೂರು ಎಸ್ ವಿಜಿವಿಎಚ್ ಎಸ್ ಎಸ್ 53 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದೆ.





