ಪತ್ತನಂತಿಟ್ಟ: ಮಕರಮಾಸ ಪೂಜೆ ವೇಳೆ ಶಬರಿಮಲೆ ದರ್ಶನಕ್ಕೆ ವರ್ಚುವಲ್ ಕ್ಯೂ ಬುಕ್ಕಿಂಗ್ ಆರಂಭವಾಗಿದೆ. ಜನವರಿ 16 ರಿಂದ 20 ರವರೆಗಿನ ಬುಕ್ಕಿಂಗ್ ಪ್ರಾರಂಭವಾಗಿದೆ.
ಜನವರಿ 16 ರಂದು 50,000 ಜನರು ಮತ್ತು 17 ರಿಂದ 20 ರವರೆಗೆ ದಿನಕ್ಕೆ 60,000 ಜನರು ದರ್ಶನಕ್ಕಾಗಿ ಬುಕ್ ಮಾಡಬಹುದು.
ಈ ದಿನಗಳಲ್ಲಿ ಪಂಬಾ, ನಿಲಕ್ಕಲ್ ಮತ್ತು ವಂಡಿಪೆರಿಯಾರ್ ಎಂಬ ಮೂರು ಕೇಂದ್ರಗಳಲ್ಲಿ ಮಾತ್ರ ಸ್ಪಾಟ್ ಬುಕ್ಕಿಂಗ್‍ಗೆ ಅವಕಾಶ ನೀಡಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಮಾಹಿತಿ ನೀಡಿರುವÀರು. ಶಬರಿಮಲೆ ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಸ್ಪಾಟ್ ಬುಕ್ಕಿಂಗ್ ಸೇರಿದಂತೆ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ.


