ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1 ರಂದು ಮಧ್ಯಂತರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
0
samarasasudhi
ಜನವರಿ 12, 2024
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1 ರಂದು ಮಧ್ಯಂತರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
17ನೇ ಲೋಕಸಭೆಯ ಕೊನೆಯ ಅವಧಿಯಾಗಿರುವ ಮಧ್ಯಂತರ ಬಜೆಟ್ ಅಧಿವೇಶನವು ಜನವರಿ 31 ರಿಂದ ಫೆಬ್ರುವರಿ 9 ರವರೆಗೆ ನಡೆಯಲಿದೆ.
ಏನಿದು ಮಧ್ಯಂತರ ಬಜೆಟ್ :
5 ವರ್ಷಗಳ ಪೂರ್ಣಾವಧಿಯ ಕೇಂದ್ರ ಸರ್ಕಾರ ತನ್ನ ಕೊನೆಯ ಬಜೆಟ್ ಅನ್ನು ಸಾಮಾನ್ಯವಾಗಿ ಮಧ್ಯಂತರ ಬಜೆಟ್ ಎಂದು ಕರೆಯುತ್ತದೆ. ಚಾಲ್ತಿಯಲ್ಲಿರುವ ಹಣಕಾಸು ವರ್ಷದ ಆರಂಭಕ್ಕೆ ಅಥವಾ ಕೊನೆಗೆ ಸಾರ್ವತ್ರಿಕ ಚುನಾವಣೆ ಬಂದರೆ ಆಗ ಮಂಡಿಸುವ ಬಜೆಟ್ ಪೂರ್ಣಕಾಲಿಕ ಬಜೆಟ್ ಆಗಿರುವುದಿಲ್ಲ. ಕೆಲವೇ ತಿಂಗಳ ಅವಧಿಯ ಖರ್ಚು ವೆಚ್ಚಗಳನ್ನು ನಿರ್ವಹಿಸುವ ಮುಂಗಡಪತ್ರವಾಗಿರುತ್ತದೆ.