HEALTH TIPS

ಫೆ. 1ರಿಂದ ಜೈಪುರ ಸಾಹಿತ್ಯ ಉತ್ಸವ

             ಜೈಪುರ: ಪ್ರತಿಷ್ಠಿತ ಜೈಪುರ ಸಾಹಿತ್ಯ ಉತ್ಸವದ (ಜೆಎಲ್‌ಎಫ್‌) 17ನೇ ಆವೃತಿಯು ಫೆಬ್ರುವರಿ 1ರಿಂದ ಆರಂಭವಾಗಲಿದ್ದು, ದೇಶ, ವಿದೇಶಗಳ ಸುಮಾರು 550 ಲೇಖಕರು ಮತ್ತು ಕಲಾವಿದರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

            ಐದು ದಿನಗಳ ಸಾಹಿತ್ಯ ಉತ್ಸವ ಇದಾಗಿದ್ದು, ಈ ಬಾರಿಯ ವಸ್ತುವಿಷಯ 'ಸ್ಟೋರೀಸ್‌ ಯುನೈಟ್ ಅಸ್‌' (ಕಥೆಗಳು ನಮ್ಮನ್ನು ಒಗ್ಗೂಡಿಸುತ್ತವೆ) ಎಂಬುದಾಗಿದೆ.

              ಸಾಹಿತ್ಯಕ್ಕಿರುವ ಪರಿವರ್ತನಾ ಶಕ್ತಿ, ಸಾಹಿತ್ಯವು ಹೇಗೆ ಸಮಾಜವನ್ನು ಪ್ರತಿಬಿಂಬಿಸುತ್ತದೆ ಮತ್ತು ಜನರನ್ನು ಹೇಗೆ ಒಗ್ಗೂಡಿಸುತ್ತದೆ ಎಂಬ ಅಂಶಗಳನ್ನು ಅನ್ವೇಷಿಸುವ ಗುರಿಯನ್ನು ಈ ಬಾರಿಯ ಜೆಎಲ್‌ಎಫ್‌ ಹೊಂದಿದೆ.

              'ಜೈಪುರದ ಕ್ಲಾರ್ಕ್ಸ್‌ ಅಮೆರ್‌ ಹೋಟೆಲ್‌ನಲ್ಲಿ ಈ ಬಾರಿಯ ಜೆಎಲ್‌ಎಫ್‌ ಜರುಗಲಿದೆ. ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಸಾಹಿತ್ಯಾಸಕ್ತರಿಗೆ ಆಮಂತ್ರಿಸುತ್ತೇವೆ. ಜಾಗತಿಕ ಸಾಹಿತ್ಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯವನ್ನು ನಾವೆಲ್ಲರೂ ಒಟ್ಟಾಗಿ ರಚಿಸೋಣ' ಎಂದು ಜೆಎಲ್‌ಎಫ್‌ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries