HEALTH TIPS

2023 ರಲ್ಲಿ ಪಾಕಿಸ್ತಾನ 306 ಉಗ್ರ ದಾಳಿಗಳಿಗೆ ಸಾಕ್ಷಿ; ಭಯೋತ್ಪಾದನೆ ಶೇ. 17 ರಷ್ಟು ಹೆಚ್ಚಳ

             ಇಸ್ಲಾಮಾಬಾದ್: ಪಾಕಿಸ್ತಾನ 2023 ರಲ್ಲಿ 306 ಉಗ್ರ ದಾಳಿಗಳಿಗೆ ಸಾಕ್ಷಿಯಾಗಿದ್ದು, ದಾಳಿಯಲ್ಲಿ 693 ಜನ ಮೃತಪಟ್ಟಿದ್ದಾರೆ ಮತ್ತು ಭಯೋತ್ಪಾದನೆ ಶೇಕಡಾ 17 ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.

             ಹೊಸ ಥಿಂಕ್ ಟ್ಯಾಂಕ್ ವರದಿಯ ಪ್ರಕಾರ, ಪಾಕಿಸ್ತಾನಿ ತಾಲಿಬಾನ್, ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಮತ್ತು ಬಲೂಚಿಸ್ತಾನ ಲಿಬರೇಶನ್ ಆರ್ಮಿಯದಂತಹ ನಿಷೇಧಿತ ಉಗ್ರ ಸಂಘಟನೆಗಳು ಶೇ. 82 ರಷ್ಟು ದಾಳಿ ನಡೆಸಿವೆ.

             ಫೆಬ್ರವರಿ 8 ರ ಸಾರ್ವತ್ರಿಕ ಚುನಾವಣೆಗೂ ಮೊದಲು ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಫಾರ್ ಪೀಸ್ ಸ್ಟಡೀಸ್(PIPS) 2023 ರ ಭದ್ರತಾ ವರದಿ ಬಿಡುಗಡೆ ಮಾಡಲಾಗಿದ್ದು, ಚುನಾವಣಾ ಪ್ರಚಾರದ ಸಮಯದಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ನಾಯಕರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಡಾನ್ ಪತ್ರಿಕೆ ಗುರುವಾರ ವರದಿ ಮಾಡಿದೆ.

               ಮತ್ತು ಅದರ ಅಂಗಸಂಸ್ಥೆಗಳು ಮಾತುಕತೆಯ ಪ್ರಕ್ರಿಯೆಯನ್ನು ಮರುಸ್ಥಾಪಿಸಲು ಪಾಕಿಸ್ತಾನವನ್ನು 'ಬಲವಂತ'ಗೊಳಿಸಲು ತೀವ್ರವಾದ ಭಯೋತ್ಪಾದನೆಯ ದಾಳಿಯನ್ನು ಆಶ್ರಯಿಸುವುದನ್ನು ಮುಂದುವರೆಸುತ್ತವೆ ಎಂದು ಉಗ್ರಗಾಮಿಗಳ ತೀವ್ರವಾದ ದಾಳಿಗಳು ಸೂಚಿಸುತ್ತವೆ ಎಂದು ವರದಿ ಹೇಳಿದೆ.

           ಖೈಬರ್ ಪಖ್ತುಂಕ್ವಾದ ವಿಲೀನಗೊಂಡ ಜಿಲ್ಲೆಗಳಲ್ಲಿ ಉಗ್ರರ ನೇಮಕಾತಿ, ತರಬೇತಿ ಮತ್ತು ಆತ್ಮಹತ್ಯಾ ಬಾಂಬರ್‌ಗಳನ್ನು ನಿಯೋಜಿಸುವುದರೊಂದಿಗೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಸದಸ್ಯರ ನಿರಂತರ ಒಳಹರಿವು ಅತ್ಯಂತ 'ಕಳವಳಕಾರಿಯಾಗಿದೆ' ಎಂದು ಆಂತರಿಕ ಸಚಿವಾಲಯ, ಸೆನೆಟ್‌ಗೆ ತಿಳಿಸಿದ ದಿನಗಳ ನಂತರ ವರದಿ ಹೊರಬಿದ್ದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries