ಇಂಫಾಲ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ 'ಭಾರತ್ ಜೋಡೊ ನ್ಯಾಯ ಯಾತ್ರೆ'ಯ ಎರಡನೇ ದಿನವನ್ನು ಇಲ್ಲಿನ ಸೆಕ್‌ಮಯಿಯಿಂದ ಪ್ರಾರಂಭಿಸಿದರು. ಈ ವೇಳೆ ತಮ್ಮನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರ ಜತೆ ಸಂವಾದ ನಡೆಸಿದರು.
0
samarasasudhi
ಜನವರಿ 16, 2024
ಇಂಫಾಲ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ 'ಭಾರತ್ ಜೋಡೊ ನ್ಯಾಯ ಯಾತ್ರೆ'ಯ ಎರಡನೇ ದಿನವನ್ನು ಇಲ್ಲಿನ ಸೆಕ್‌ಮಯಿಯಿಂದ ಪ್ರಾರಂಭಿಸಿದರು. ಈ ವೇಳೆ ತಮ್ಮನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರ ಜತೆ ಸಂವಾದ ನಡೆಸಿದರು.
ವಿಶೇಷವಾಗಿ ಸಿದ್ದಪಡಿಸಲಾಗಿರುವ ವೋಲ್ವೊ ಬಸ್‌ನಲ್ಲಿ ಎರಡನೇ ದಿನದ ಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ, ಬಳಿಕ ಜನರ ಕಷ್ಟಗಳನ್ನು ಆಲಿಸುತ್ತಾ ಕೆಲವು ದೂರ ನಡೆದರು.
ದಾರಿಯುದ್ದಕ್ಕೂ ನೆರೆದಿದ್ದ ಜನರು, ರಾಹುಲ್ ಗಾಂಧಿ ಪರ ಘೋಷಣೆ ಕೂಗಿದರು. ಹೀಗೆ ಸೇರಿದವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.
'ಬೆಳಿಗ್ಗೆ 7.30ಕ್ಕೆ ಸೇವಾದಳದ ಧ್ವಜಾರೋಹಣ ಮಾಡುವ ಮೂಲಕ ಭಾರತ್ ಜೋಡೊ ನ್ಯಾಯ ಯಾತ್ರೆಯ ಎರಡನೇ ದಿನವನ್ನು ಪ್ರಾರಂಭಿಸಲಾಯಿತು. ಯಾತ್ರೆಯು ಸೆಕ್‌ಮಯಿಯಿಂದ ಕಂಗ್‌ಪೋಪ್ಕಿ, ಅಲ್ಲಿಂದ ಸೇನಾಪತಿವರೆಗೆ ಸಾಗಲಿದೆ. ರಾತ್ರಿ ನಾಗಾಲ್ಯಾಂಡ್‌ನಲ್ಲಿ ತಂಗಲಿದೆ' ಎಂದು ಕಾಂಗ್ರೆಸ್‌ನ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.