ಮುಂಬೈ: ಆನ್‌ಲೈನ್ ವಂಚನೆಗೊಳಗಾದ ಮಹಿಳೆಯ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಮುಂಬೈ ಪೊಲೀಸರು, ವಂಚಕರ ಖಾತೆಗೆ ವರ್ಗಾವಣೆಯಾಗಬೇಕಿದ್ದ ₹ 3.70 ಕೋಟಿಯನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಜನವರಿ 4ರಂದು ಈ ಘಟನೆ ನಡೆದಿದೆ.
0
samarasasudhi
ಜನವರಿ 10, 2024
ಮುಂಬೈ: ಆನ್‌ಲೈನ್ ವಂಚನೆಗೊಳಗಾದ ಮಹಿಳೆಯ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಮುಂಬೈ ಪೊಲೀಸರು, ವಂಚಕರ ಖಾತೆಗೆ ವರ್ಗಾವಣೆಯಾಗಬೇಕಿದ್ದ ₹ 3.70 ಕೋಟಿಯನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಜನವರಿ 4ರಂದು ಈ ಘಟನೆ ನಡೆದಿದೆ.
ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಎಚ್ಚೆತ್ತ ಮಹಿಳೆ ತಕ್ಷಣವೇ ಮುಂಬೈ ಅಪರಾಧ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ಸಲ್ಲಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತ್ವರಿತವಾಗಿ ಕ್ರಮಕೈಗೊಂಡಿದ್ದಾರೆ. ಸಂಬಂಧಿಸಿದ ಬ್ಯಾಂಕಿನ ನೋಡಲ್ ಅಧಿಕಾರಿಯೊಂದಿಗೆ ಮಾತನಾಡಿ ಹಣ ವರ್ಗಾವಣೆಗೆ ಬಳಸಿದ ಖಾತೆಗಳನ್ನು ಫ್ರೀಜ್ ಮಾಡುವ ಮೂಲಕ ₹3.67 ಕೋಟಿ ತಡೆ ಹಿಡಿದಿದ್ದಾರೆ.
2023ರಲ್ಲಿ ಸೈಬರ್ ವಂಚಕರಿಂದ ಕಳೆದುಕೊಂಡಿದ್ದ ₹26.48 ಕೋಟಿ ಅನ್ನು ಸಂತ್ರಸ್ತರಿಗೆ ಹಿಂತಿರುಗಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.