ಬದಿಯಡ್ಕ: 3204 ರೋಟರಿ ಜಿಲ್ಲಾ ಗವರ್ನರ್‍ರವರ ಅಧಿಕೃತ ಭೇಟಿ ಕಾರ್ಯಕ್ರಮ ಬದಿಯಡ್ಕ ಇರಾ ಸಭಾಭವನ ವಳಮಲೆಯಲ್ಲಿ ಬುಧವಾರ ಸಂಜೆ ಜರಗಿತು. ಬದಿಯಡ್ಕ ರೋಟರಿ ಅಧ್ಯಕ್ಷ ಬಿ. ರಾಧಾಕೃಷ್ಣ ಪೈಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೋಟರಿ 3204 ರಾಜ್ಯಪಾಲರಾಗಿರುವ ಡಾ. ಎಂ. ಡಿ. ಸೇತುಶಿವಶಂಕರ್ ಹಾಗೂ 3204 ಉಪ ಜಿಲ್ಲಾ ಗವರ್ನರ್ ಕಾಸರಗೋಡಿನ ವಿಶಾಲ್ ಕುಮಾರ್ ರವರು ಭಾಗವಹಿಸಿ ರಾಜ್ಯಪಾಲರ ಸ್ಥೂಲ ಪರಿಚಯವನ್ನು ಮಾಡಿದರು ಮತ್ತು ನೂತನ ರೋಟರಿ ಸದಸ್ಯರಾದ ಕಾಸರಗೋಡಿನ `ಸರ್ಕಾರಿ ಜನರಲ್ ಆಸ್ಪತ್ರೆಯ ಶ್ವಾಸಕೋಶ ಹಾಗೂ ಕ್ಷಯ ರೋಗ ತಜ್ಞರಾಗಿರುವ ವೈದ್ಯಾಧಿಕಾರಿ ಡಾ. ನಾರಾಯಣ ಪ್ರದೀಪ್ ಪೆರ್ಮುಖ ಹಾಗೂ ಸಜಿ ಕಾಡಮನೆ ಮತ್ತು ಬದಿಯಡ್ಕದ ಉದ್ಯಮಿ ಪ್ರತಿಕ್ ಆಳ್ವಾರವನ್ನು ಬದಿಯಡ್ಕ ಘಟಕಕ್ಕೆ ನೂತನ ಸದಸ್ಯರಾಗಿ ಬರ ಮಾಡಿಕೊಳ್ಳಲಾಯಿತು.
ಸಮಾರಂಭದಲ್ಲಿ ಹಿರಿಯ ರೋಟರಿ ಸದಸ್ಯರೂ, ಪ್ರಗತಿಪರ ಕೃಷಿಕರೂ ರಂಗ ನಿರ್ದೇಶಕರೂ ಆಗಿರುವ ರೊಟೇರಿಯನ್ ಪೆರಡಾಲ ಗುತ್ತು ಗಂಗಾಧರ ಆಳ್ವರ ಅವರನ್ನು ಗೌರವಿಸಿ ರೋಟರಿ ಬದಿಯಡ್ಕ ಘಟಕಕ್ಕೆ ಸಲ್ಲಿಸಿದ ಅತ್ಯಮೂಲ್ಯ ಶ್ಲಾಘನಿಯ ಸೇವೆಗಾಗಿ ರಾಜ್ಯಪಾಲರು ಶಾಲನ್ನು ಹೊದಿಸಿ ಗೌರವಿಸಿದರು. ರೋಟರಿ ನೀಲೇಶ್ವರ, ಒಡೆಯಂಚಾಲ್, ಪಯ್ಯನ್ನೂರು, ಕಾಞಂಗಾಡ್, ಕಾಸರಗೋಡಿನ ಸದಸ್ಯರು ಪಾಲ್ಗೊಂಡಿದ್ದರು. ಬದಿಯಡ್ಕ ರೋಟರಿ ಸದಸ್ಯರೆಲ್ಲರೂ ಕುಟುಂಬಸಮೇತರಾಗಿ ಪಾಲ್ಗೊಂಡಿದ್ದರು. ರೋಟರಿ ಖಜಾಂಜಿ ಕೇಶವ. ಬಿ ಸ್ವಾಗತಿಸಿ, ಕಿಶೋರ್ ಕುಮಾರ್ ಸ್ವಾಮಿಕೃಪಾ ಕನ್ಯಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಬದಿಯಡ್ಕ ಕಾರ್ಯದರ್ಶಿ ವೈ. ರಾಘವೇಂದ್ರ ಪ್ರಸಾದ್ ನಾಯಕ್ ವಂದಿಸಿದರು.




.jpg)
