ಕೊಚ್ಚಿ: ನಿಷೇಧಿತ ಸಂಘಟನೆ ಸಿಪಿಐ-ಮಾವೋವಾದಿ ಕೇಂದ್ರ ಸಮಿತಿ ಸದಸ್ಯ ಸಂಜಯ್ ದೀಪಕ್ ರಾವ್ ನ ಬಂಧನ ಪ್ರಕರಣ ಕೇರಳದಲ್ಲಿ ದಾಖಲಾಗಿದೆ.
ಕೊಚ್ಚಿಯ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ನಿನ್ನೆ ಹಾಜರುಪಡಿಸಿದ ನಂತರ ರಿಮಾಂಡ್ ಮಾಡಲಾಗಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ತೆಲಂಗಾಣದಲ್ಲಿ ಸಂಜಯ್ ದೀಪಕ್ ರಾವ್ ನನ್ನು ಬಂಧಿಸಲಾಗಿತ್ತು. ಪೋಲೀಸರ ಪ್ರಕಾರ, ೬೦ ವರ್ಷದ ಸಂಜಯ್ ದೀಪಕ್ ರಾವ್ ಪಶ್ಚಿಮ ಘಟ್ಟಗಳಲ್ಲಿ ಮಾವೋವಾದಿ ಚಟುವಟಿಕೆಗಳನ್ನು ಮುನ್ನಡೆಸುವ ವಿಶೇಷ ವಲಯದ ಮುಖ್ಯಸ್ಥ.
ಮಾವೋವಾದಿ ನಾಯಕ ಮಣಿವಾಸಗಂ ಎನ್‌ಕೌಂಟರ್‌ನಲ್ಲಿ ಹತನಾದ ನಂತರ ಪಶ್ಚಿಮಘಟ್ಟ ಪ್ರದೇಶದ ನಾಯಕತ್ವವನ್ನು ಸಂಜಯ್ ದೀಪಕ್ ರಾವ್ ವಹಿಸಿಕೊಂಡಿದ್ದ. ಬಂಧನದ ವೇಳೆ ಆರು ಬುಲೆಟ್‌ಗಳಿದ್ದ ರಿವಾಲ್ವರ್, ೪೭,೨೫೦ ರೂ., ಲ್ಯಾಪ್‌ಟಾಪ್ ಸೇರಿದಂತೆ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೇರಳ, ತಮಿಳುನಾಡು ಮತ್ತು ಕರ್ನಾಟಕ ಕೇಂದ್ರೀಕರಿಸಿ ಎನ್‌ಐಎ ಕಾರ್ಯಾಚರಣೆ ನಡೆಸಿತ್ತು. ಸಂಜಯ್ ದೀಪಕ್ ರಾವ್ ಬಗ್ಗೆ ಮಾಹಿತಿ ನೀಡಿದವರಿಗೆ ೨೫ ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿತ್ತು.


