HEALTH TIPS

ವಿದ್ಯುತ್‌ ಆಮದು: ಭಾರತ-ನೇಪಾಳ ಒಪ್ಪಂದ

               ಠ್ಮಂಡು: ಮುಂದಿನ 10 ವರ್ಷಗಳಲ್ಲಿ ನೇಪಾಳದಿಂದ 10 ಸಾವಿರ ಮೆಗಾವಾಟ್ ವಿದ್ಯುತ್ ಆಮದು ಮಾಡಿಕೊಳ್ಳುವ ಕುರಿತು ಭಾರತ ಗುರುವಾರ ಒಪ್ಪಂದ ಮಾಡಿಕೊಂಡಿತು. ಈ ಒಪ್ಪಂದ ಹೆಚ್ಚಿನ ಹೂಡಿಕೆ ಸೆಳೆಯಲು ನೇಪಾಳಕ್ಕೆ ನೆರವಾಗಲಿದೆ ಎಂದು ಹೇಳಲಾಗಿದೆ.

              ನೇಪಾಳದಲ್ಲಿನ ನದಿಗಳಿಂದಾಗಿ ವಾರ್ಷಿಕ 42 ಸಾವಿರ ಮೆಗಾವಾಟ್‌ ಜಲವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ.

               ಆದರೆ, ತಾಂತ್ರಿಕತೆ ನೆರವು, ಹಣಕಾಸು ಸಂಪನ್ಮೂಲ ಕೊರತೆಯಿಮದಾಗಿ ಇದು ಸಾಧ್ಯವಾಗಿಲ್ಲ. ಪ್ರಸ್ತುತ ವಾರ್ಷಿಕ 3000 ಮೆಗಾವಾಟ್ ಉತ್ಪಾದನೆಯಾಗುತ್ತಿದೆ.

               ಪ್ರಸ್ತುತ ನೇಪಾಳದ ಜೊತೆಗೆ ಅಲ್ಪಾವಧಿಯ ವಿದ್ಯುತ್‌ ಖರೀದಿ ಒಡಂಬಡಿಕೆ ಹೊಂದಿರುವ ಭಾರತ, ನೇಪಾಳದಲ್ಲಿ ಜಲವಿದ್ಯುತ್‌ ಸ್ಥಾವರಗಳ ಸ್ಥಾಪನೆಗೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುತ್ತಿದೆ. ನೆರೆ ರಾಷ್ಟ್ರದಲ್ಲಿ ತನ್ನ ಪ್ರಭಾವ ಉತ್ತಮಪಡಿಸಿಕೊಳ್ಳುವ ಉದ್ದೇಶವು ಇದೆ.

            ನೆರೆ ರಾಷ್ಟ್ರ ಚೀನಾ ಗಡಿಯಲ್ಲಿ ಹೆಚ್ಚು ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಈ ಒಡಂಬಡಿಕೆಯು ಮಹತ್ವದ್ದಾಗಿದೆ.ಪ್ರಧಾನಿ ನರೇಂದ್ರ ಮೋದಿ, ನೇಪಾಳದ ಪ್ರಧಾನಿ ಪುಷ್ಪಕಮಲ್‌ ದಾಹಲ್‌ ಅವರು ವಿದ್ಯುತ್‌ ಕ್ಷೇತ್ರದಲ್ಲಿ ದೀರ್ಘಾವಧಿ ಒಪ್ಪಂದ ಹೊಂದಲು ಕಳೆದ ವರ್ಷ ಸಮ್ಮತಿಸಿದ್ದರು.

               ಈ ಕುರಿತು ಪ್ರತಿಕ್ರಿಯಿಸಿದ ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಪ್ರೇಮ್‌ ರೈ ಅವರು, ವಿದ್ಯುತ್ ಖರೀದಿ ಸೇರಿದಂತೆ ಒಟ್ಟು ನಾಲ್ಕು ಒಪ್ಪಂದಗಳನ್ನು ನೇಪಾಳ-ಭಾರತ ಜಂಟಿ ಆಯೋಗದ ಸಭೆಯಲ್ಲಿ ಗುರುವಾರ ಅಂತಿಮಗೊಳಿಸಲಾಗಿದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries