ಕಾಸರಗೋಡು: ಕನ್ನಡ ಭವನದ ರೂವಾರಿ ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ದಂಪತಿಗೆ 'ಕುವೆಂಪು ವಿಶ್ವಮಾನವ ಕನ್ನಡರತ್ನ ಪ್ರಶಸ್ತಿ'ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ವಿಶ್ವಮಾನವ ಕುವೆಂಪು ಜನ್ಮದಿನ ಸಂಭ್ರಮದಲ್ಲಿ 'ಆದರ್ಶ ಕನ್ನಡ ದಂಪತಿಗಳು ಶೀರ್ಷಿಕೆಯಲ್ಲಿ ನೀಡಿ ಗೌರವಿಸಲಾಯಿತು.
ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಕೆ. ಚಿದಾನಂದ ಗೌಡ, ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆÀರೆ ಗೋಪಾಲ್, ಪಂಪ ಪ್ರಶಸ್ತಿ ಪುರಸೃತ ವಿದ್ವಾಂಸ ಡಾ| ಸಿ.ಪಿ.ಕೃಷ್ಣ ಕುಮಾರ್(ಸಿ.ಪಿ.ಕೆ) ಕಾರ್ಯಕ್ರಮ ರಾವಾರಿಟಿ. ಶಿವಕುಮಾರ್ ಕೋಲಾರ, ಟಿ. ಸತೀಶ್ ಜವರೇ ಗೌಡ, ಶ್ರೀಮತಿ ಎನ್. ಶಾರದಮ್ಮ, ಡಾ. ಟಿ. ತ್ಯಾಗರಾಜ್, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಸುರೇಂದ್ರ ಸಮಗಾರ್, ಕೃಷ್ಣೇ ಗೌಡ, ಅಜಿತ್ ಹೊನ್ನಾಪುರ, ಮೈಸೂರು ವಿಜಯವಾಣಿ ಮುಖ್ಯವರದಿಗಾರ ಆರ್. ಕೃಷ್ಣ ಮೊದಲಾದವರು ಉಪಸ್ಥೀತರಿದ್ದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶ್ರೀ ಕೊಟ್ಟೂರು ಬಸವೇಶ್ವರ ಟ್ರಸ್ಟ್ ಸಂಯುಕ್ತ ಆಶ್ರಯ ಹಾಗೂ ಸ್ವರ್ಣಭೂಮಿ ಫೌಂಡೇಷನ್ ಕರ್ನಾಟಕ ಸಹಕಾರದಲ್ಲಿ ಕಾರ್ಯಕ್ರಮ ಜರಗಿತು.





