ಸೋಲ್: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ದಕ್ಷಿಣ ಕೊರಿಯಾದ ಪ್ರತ್ಯೇಕ ಸ್ಥಾನಮಾನವನ್ನು ಬದಲಾಯಿಸಲು ಸಾಂವಿಧಾನಿಕ ತಿದ್ದುಪಡಿಗೆ ಕರೆ ನೀಡಿದ್ದಾರೆ ಎಂದು ಕೊರಿಯಾ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ವರದಿ ಮಾಡಿದೆ.
0
samarasasudhi
ಜನವರಿ 16, 2024
ಸೋಲ್: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ದಕ್ಷಿಣ ಕೊರಿಯಾದ ಪ್ರತ್ಯೇಕ ಸ್ಥಾನಮಾನವನ್ನು ಬದಲಾಯಿಸಲು ಸಾಂವಿಧಾನಿಕ ತಿದ್ದುಪಡಿಗೆ ಕರೆ ನೀಡಿದ್ದಾರೆ ಎಂದು ಕೊರಿಯಾ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ವರದಿ ಮಾಡಿದೆ.
ಸೋಮವಾರ ಸಂಸತ್ತಿನಲ್ಲಿ ಮಾತನಾಡಿದ ಅವರು, 'ನಮ್ಮ ದೇಶವು ಯುದ್ಧವನ್ನು ಬಯಸುವುದಿಲ್ಲ.ಆದರೆ, ಅದನ್ನು ತಪ್ಪಿಸುವ ಉದ್ದೇಶವಿಲ್ಲ. ದಕ್ಷಿಣ ಕೊರಿಯಾದೊಂದಿಗಿನ ಏಕೀಕರಣವು ಇನ್ನು ಮುಂದೆ ಸಾಧ್ಯವಿಲ್ಲ. ಇದೇ ನಮ್ಮ ಅಂತಿಮ ತೀರ್ಮಾನವಾಗಿದೆ' ಎಂದು ಹೇಳಿದ್ದಾರೆ.