ವಯನಾಡು: ವನ್ಯಮೃಗಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಘಟನೆಗಳು ವರದಿಯಾಗುತ್ತಿರುವ ನಡುವೆಯೇ, ಜಿಲ್ಲೆಯ ಸುಲ್ತಾನ್ ಬತ್ತೇರಿಯ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಗಂಡು ಹುಲಿಯೊಂದು ಶನಿವಾರ ಸಿಕ್ಕಿ ಹಾಕಿಕೊಂಡಿದೆ.
0
samarasasudhi
ಜನವರಿ 28, 2024
ವಯನಾಡು: ವನ್ಯಮೃಗಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಘಟನೆಗಳು ವರದಿಯಾಗುತ್ತಿರುವ ನಡುವೆಯೇ, ಜಿಲ್ಲೆಯ ಸುಲ್ತಾನ್ ಬತ್ತೇರಿಯ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಗಂಡು ಹುಲಿಯೊಂದು ಶನಿವಾರ ಸಿಕ್ಕಿ ಹಾಕಿಕೊಂಡಿದೆ.
' ಬೀನಾಚಿ ಎಸ್ಟೇಟ್‌ನಲ್ಲಿ ಇರಿಸಲಾಗಿದ್ದ ಬೋನಿನೊಳಗೆ ಹುಲಿ ಸಿಕ್ಕಿಬಿದ್ದಿದೆ.
ಸಿಕ್ಕಿಬಿದ್ದಿರುವ ಹುಲಿಯು 11 ವರ್ಷದ್ದಾಗಿದ್ದು, ಇದನ್ನು 'ಡಬ್ಲ್ಯುವೈಎಸ್9' ಎಂದು ಗುರುತಿಸಲಾಗಿದೆ. ಹುಲಿಯನ್ನು ಆಸ್ಪತ್ರೆ ಮತ್ತು ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಆತಂಕ ತಂದ ಕರಡಿ: ಇನ್ನೊಂದೆಡೆ, ಬತ್ತೇರಿ ಪಟ್ಟಣದ ರಸ್ತೆಯೊಂದರಲ್ಲಿ ಕರಡಿಯೊಂದು ನಡೆದಾಡುತ್ತಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಕರಡಿ ಓಡಾಡುತ್ತಿರುವ ದೃಶ್ಯಗಳ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
'ವಿಡಿಯೊದಲ್ಲಿ ಕಾಣಿಸುವ ಕರಡಿ ಹಾಗೂ ಇತ್ತೀಚೆಗೆ ಸಕ್ಕರೆಗಾಗಿ ಮನೆಯೊಂದನ್ನು ಪ್ರವೇಶಿಸಿದ್ದ ಕರಡಿ ಎರಡೂ ಒಂದೆಯೇ ಎನ್ನುವುದು ಖಚಿತವಾಗಬೇಕಿದೆ' ಎಂದಿದ್ದಾರೆ.