ನವದೆಹಲಿ: ಅಯೋಧ್ಯೆಯ ರಾಮಮಂದಿರದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಕೋಟ್ಯಂತರ ಜನರನ್ನು ಒಗ್ಗೂಡಿಸಿದೆ. ಈ ಕಾರ್ಯಕ್ರಮವು ದೇಶದ ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
0
samarasasudhi
ಜನವರಿ 28, 2024
ನವದೆಹಲಿ: ಅಯೋಧ್ಯೆಯ ರಾಮಮಂದಿರದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಕೋಟ್ಯಂತರ ಜನರನ್ನು ಒಗ್ಗೂಡಿಸಿದೆ. ಈ ಕಾರ್ಯಕ್ರಮವು ದೇಶದ ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈ ವರ್ಷದ ಮೊದಲ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ರಾಮನ ಆಡಳಿತವು ಸಂವಿಧಾನ ರಚನಾಕಾರರಿಗೆ ಸ್ಫೂರ್ತಿಯ ಮೂಲವಾಗಿದೆ.
ಅಯೋಧ್ಯೆಯಲ್ಲಿ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ದೇಶದ ಕೋಟ್ಯಂತರ ಜನರನ್ನು ಒಟ್ಟುಗೂಡಿಸಿದೆ. ಎಲ್ಲರ ಭಾವನೆಯೂ ಒಂದೇ, ಎಲ್ಲರ ಭಕ್ತಿಯೂ ಒಂದೇ, ಎಲ್ಲರ ಮಾತಿನಲ್ಲೂ ಹಾಗೂ ಹೃದಯದಲ್ಲೂ ರಾಮನಿದ್ದಾನೆ ಎಂದು ಪ್ರಧಾನಿ ಮೋದಿ ಹೇಳಿದರು.
ಜನವರಿ 22ರಂದು ಅನೇಕ ಜನರು ರಾಮ ಭಜನೆಗಳನ್ನು ಹಾಡಿದರು. ಇಡೀ ದೇಶವು ರಾಮ ಜ್ಯೋತಿಯನ್ನು ಬೆಳಗಿಸಿ ದೀಪಾವಳಿಯನ್ನು ಆಚರಿಸಿತು. ಇದು ದೇಶದ ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸುತ್ತದೆ. ಅಲ್ಲದೆ, ಅಭಿವೃದ್ಧಿ ಹೊಂದಿದ ಭಾರತ ಎಂಬ ನಮ್ಮ ಪ್ರತಿಜ್ಞೆಯ ಆಧಾರವಾಗಿದೆ ಎಂದು ಅವರು ತಿಳಿಸಿದರು.