ಕಾಸರಗೋಡು: ಹೊಸ ಬಸ್ ನಿಲ್ದಾಣ ಪ್ರದೇಶದಲ್ಲಿ ಹೊಟೇಲ್‍ಗಳಿಂದ ಹೊರಹರಿಯುವ ಮಲಿನ ನೀರು ತೆರೆದ ಪ್ರದೆಸದಲ್ಲಿ ಹರಿಯುತ್ತಿದ್ದು, ಈ ಪ್ರದೇಶದಲ್ಲಿ ದುಗಧ ಹಾಗೂ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಬಿಎಂಎಸ್ ಕಾಸರಗೋಡು ಪ್ರಾದೇಏಶಿಕ ಸಮಿತಿ ವತಿಯಿಮದ ನಗರಸಭಾ ಕಚೇರಿ ಎದುರು ಧರಣಿ ನಡೆಯಿತು.
ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು ಧರಣಿ ಉದ್ಘಾಟಿಸಿ ಮಾತನಾಡಿ, ಕಳೆದ ಹದಿನೈದು ದಿವಸಗಳಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದರೂ, ಸಂಬಂಧಪಟ್ಟವರ್ಯಾರೂ ಇತ್ತ ಮುಖಮಾಡದಿರುವುದರಿಂದ ಇಲ್ಲಿನ ನಿವಾಸಿಗಳು ಮೂಗುಮುಚ್ಚಿಕೊಂಡು ಕಾಲ ಕಳೆಯುವ ಸ್ಥಿತಿಯಿದೆ.ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರ ಹೆಚ್ಚಿನ ಜನದಟ್ಟಣೆಯಿಂದ ಕೂಡಿರುವುದಲ್ಲದೆ, ಬಸ್ ನಿಲ್ದಾಣ ಒಳಗೊಂಡಿರುವ ನಗರಸಭಾ ಕಾಂಪ್ಲೆಕ್ಸ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ಆರಕ್ಕೂ ಹೆಚ್ಚು ಹೋಟೆಲ್, ತಂಪು ಪಾನೀಯ ಸೇರಿದಂತೆ ವಿವಿಡೆಯಿಂದ ಹರಿದು ಬರುತ್ತಿರುವ ನೀರು, ಬಸ್‍ನಿಲ್ದಾಣದ ಒಂದು ಪಾಶ್ರ್ವದ ರಸ್ತೆಯಲ್ಲಿ ಹರಿಯುವಂತಾಗಿದೆ. ಆಟೋ, ಟ್ಯಾಕ್ಸಿ ನಿಲ್ದಾಣಕ್ಕೆ ತೆರಳುವವರು ಕೊಳಚೆನೀರನ್ನು ತುಳಿದುಕೊಂಡೇ ಮುಂದೆ ಸಾಗಬೇಕು. ಇನ್ನು ಈ ಹಾದಿಯಾಗಿ ವೇಗದಿಂದ ಬರುವ ವಾಹನಗಳ ಚಕ್ರದಿಂದ ದುರ್ವಾಸನೆಯುಕ್ತ ಮಲಿನ ಜಲ ಪಾದಚಾರಿಗಳ ಮೈಮೇಲೆ ಸಿಂಪಡಣೆಯಾಗುತ್ತಿದೆ. ಮಲಿನ ನೀರು ರಸ್ತೆಗೆ ಹರಿಯುವುದನ್ನು ತಡೆಗಟ್ಟಲು ನಗರಸಭೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಪ್ರಬಲ ಹೋರಾಟಕ್ಕೆ ಸಂಘಟನೆ ಮುಮದಾಗಲಿದೆ ಎಂದು ತಿಳಿಸಿದರು.
ಬಿಎಂಎಸ್ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕುಞÂಕಣ್ಣನ್ ಚಾತಂಗೈ ಅಧ್ಯಕ್ಷತೆ ವಹಿಸಿದ್ದರು.ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಕೆ.ಎ. ಶ್ರೀನಿವಾಸನ್, ಅನಿಲ್ ಬಿ.ನಾಯರ್, ಜತೆ ಕಾರ್ಯದರ್ಶಿ ಪಿ.ದಿನೇಶ್, ಎಸ್.ಕೆ.ಉಮೇಶ್ ಉಪಸ್ಥಿತರಿದ್ದರು. ಪ್ರಸಾದ್, ಎ. ಕೇಶವ, ಜನಾರ್ದನ್ ಅಣಂಗೂರು, ರವಿ ಧರಣಿ ನೇತ್ರತ್ವ ವಹಿಸಿದ್ದರು. ರಿಜೇಶ್ ಜೆ.ಪಿ.ನಗರ ಸ್ವಾಗತಿಸಿದರು. ಮನೋಹರನ್ ನೆಲ್ಲಿಕುನ್ನು ವಂದಿಸಿದರು.
ಹೊಸ ಬಸ್ ನಿಲ್ದಾಣ ವಠಾರದಲ್ಲಿ ಮಲಿನ ನೀರು ರಸ್ತೆಗೆ ಹರಿಯುತ್ತಿರುವ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.




