ಕಾಸರಗೋಡು: ಜಿಲ್ಲಾ ಪಂಚಾಯಿತಿ ಆಡಳಿತ ಸಮಿತಿ ಸಭೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ನಡೆಯಿತು.
. ಕಲ್ಲಿಯೊಟ್ ಜಿಎಚ್‍ಎಸ್‍ಎಸ್ ಶಾಲಾ ನವೀಕರಣ ಕಾಮಗಾರಿ, ಪೆರುಂಬಟ್ಟ ಜಿಎಚ್‍ಎಸ್‍ಎಸ್‍ನಲ್ಲಿ ವೇದಿಕೆ ನಿರ್ಮಾಣ, ಕುಟ್ಟಮತ್ತ್ ಜಿಎಚ್‍ಎಸ್‍ಎಸ್, ಕಾಲಿಚ್ಚಾನಡ್ಕ ಜಿಎಚ್‍ಎಸ್‍ಎಸ್, ಕಳ್ಳಾರ್ ಪಂಚಾಯಿತಿಯಲ್ಲಿ ಆಟದ ಮೈದಾನದ ಸುಧಾರಣೆ, ಪೂಕುನ್ನು ಪರಿಶಿಷ್ಟ ಕಾಲೋನಿ ಸಮುದಾಯ ಭವನ ನಿರ್ಮಾಣಗಳು ಜಿಲ್ಲಾ ಪಂಚಾಯಿತಿಯ ಪ್ರಸಕ್ತ ಆರ್ಥಿಕ ವರ್ಷದ ಯೋಜನೆಯಲ್ಲಿ ಸೇರ್ಪಡೆಗೊಂಡ ಯೋಜನೆಗಳಾಗಿವೆ. ಕಣ್ಣಿವಯಲ್ ಟಿಟಿಐ ನವೀಕರಣ ಕಾಮಗಾರಿ, ಕಂಜಿರಪೆÇಯಿ ಜಿಎಚ್‍ಎಸ್‍ಎಸ್ ಮತ್ತು ಪರಪ್ಪ ಜಿಎಚ್‍ಎಸ್‍ಎಸ್ ಆಟದ ಮೈದಾನ ನವೀಕರಣ ಕಾಮಗಾರಿ, ಅಂಬಲತ್ತುಕರ, ಭೀಮಾನದಿ, ತ್ರಿಕರಿಪುರ, ಕೊಡಕ್ಕಾಡ್ ಖಾದಿ ಘಟಕಗಳ ನವೀಕರಣ ಕಾಮಗಾರಿಗೆ ಟೆಂಡರ್ ಆಹ್ವಾನಿಸಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅಟ್ಟಿಂಗಾನಂ ಜಿಎಚ್‍ಎಸ್‍ಎಸ್‍ನಲ್ಲಿ ಆಟದ ಮೈದಾನ ನಿರ್ಮಾಣ ಕಾಮಗಾರಿ, ಕಾಂಞಂಗಾಡ್ ಜಿಲ್ಲಾ ಆಯುರ್ವೇದ ಆಸ್ಪತ್ರೆ ನವೀಕರಣ ಕಾಮಗಾರಿ. ವಿವಿಧ ರಸ್ತೆಗಳ ರಿಟಾರಿಂಗ್. ವಿವಿಧ ಕಾಮಗಾರಿಗಳಿಗೆ ಇ-ಟೆಂಡರ್/ ಪುನರ್ ಇ-ಟೆಂಡರ್ ಆಹ್ವಾನದ ಮೇರೆಗೆ ಸ್ವೀಕೃತವಾದ ಟೆಂಡರ್ ತೆರೆದು ಸಿದ್ಧಪಡಿಸಿದ ಹೋಲಿಕೆ ಪಟ್ಟಿಯನ್ನು ಅನುಮೋದಿಸಲು ಮತ್ತು ಏಕ ಟೆಂಡರ್ ಸ್ವೀಕರಿಸಿದ ಮತ್ತು ಯಾರೂ ಇಲ್ಲದ ಯೋಜನೆಗಳಿಗೆ ಪುನರ್ ಟೆಂಡರ್ ಕರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ, ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಕೃಷ್ಣನ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಜೆ.ಸಜಿತ್, ಜಾಸ್ಮಿನ್ ಕಬೀರ್, ನಾರಾಯಣ ನಾಯ್ಕ್, ಕೆ.ಕಮಲಾಕ್ಷಿ, ಶೈಲಜಾ ಎಂ.ಭಟ್, ಜಮೀಲಾ ಸಿದ್ದಿಕ್ ದಂಡೆಗೋಳಿ, ಜಿಲ್ಲಾ ಪಂಚಾಯಿತಿ. ಕಾರ್ಯದರ್ಶಿ ಪಿ.ಕೆ.ಸಜೀವ್, ಪದಾಧಿಕಾರಿಗಳು, ಅಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.




.jpeg)
