ನವದೆಹಲಿ: ವಿಲನ್ ತನ್ನ ವಾಹನದಲ್ಲಿ ಅತ್ಯಂತ ವೇಗವಾಗಿ ಸಂಚರಿಸುತ್ತಿರುತ್ತಾನೆ. ಹೀರೋ ತನ್ನ ಬೈಕ್ನಲ್ಲಿ ಅವನನ್ನು ಬೆನ್ನತ್ತುತ್ತಾನೆ. ಅಲ್ಲಿಯವರೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನಾಯಕ ಒಂದು ಗುಂಡಿಯನ್ನು ಒತ್ತಿದರೆ ಆ ವಾಹನವು ಶಕ್ತಿಶಾಲಿ ರೇಸಿಂಗ್ ಕಾರ್ ಆಗಿ ಬದಲಾಗುತ್ತದೆ… ಇಂತಹ ದೃಶ್ಯ ಸಾಮಾನ್ಯವಾಗಿ ಹಾಲಿವುಡ್ ಸಾಹಸ ಚಿತ್ರಗಳಲ್ಲಿ ಕಂಡುಬರುತ್ತವೆ.
ಆದರೆ, ಇದು ನಿಜ ಜೀವನದಲ್ಲೂ ನಡೆದರೆ? ಹೌದು ಬೈಕ್ ತ್ರಿಚಕ್ರವಾಹನ(ಕಾರ್)ವಾಗಿ ಮಾರ್ಪಡುವ ಆವಿಷ್ಕಾರವಾಗಿದೆ!
ಹೀರೋ ಮೋಟೋಕಾರ್ಸ್‌ನ ಸರ್ಜ್ ಸ್ಟಾರ್ಟ್‌ಅಪ್ ಹೊಸ ವಾಹನವನ್ನು ವಿನ್ಯಾಸಗೊಳಿಸಿದ್ದು ಎಲೆಕ್ಟ್ರಿಕ್ ಸ್ಕೂಟರ್ ಸೆಕೆಂಡುಗಳಲ್ಲಿ ಕಾರ್ ಆಗಿ ಪರಿವರ್ತಿಸಬಹುದಾಗಿದೆ. ಇತ್ತೀಚೆಗೆ ನಡೆದ 'ಹೀರೋ ವರ್ಲ್ಡ್' ಕಾರ್ಯಕ್ರಮದಲ್ಲಿ ಇದನ್ನು ಪ್ರದರ್ಶಿಸಲಾಯಿತು.
ಈ ವಾಹನವನ್ನು ಸರ್ಚ್32 ಎಂದು ಕರೆಯಲಾಗಿದೆ. ಇದನ್ನು ವಿಶೇಷವಾಗಿ ಸ್ವಯಂ ಉದ್ಯೋಗಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಇದು ಟು-ಇನ್-ಒನ್ ಎಲೆಕ್ಟ್ರಿಕ್ ವಾಹನವಾಗಿದೆ.
ಇದನ್ನು ಅವಶ್ಯಕತೆಗೆ ಅನುಗುಣವಾಗಿ ಬದಲಾಯಿಸಬಹುದು. ಬೈಕ್ ಮೂರು ಚಕ್ರ(ಕಾರ್)ನಂತೆ ವಿಂಡ್‌ಸ್ಕ್ರೀನ್, ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್‌ಗಳು, ವಿಂಡ್‌ಸ್ಕ್ರೀನ್ ವೈಪರ್‌ಗಳನ್ನು ಕೇವಲ ಮೂರು ನಿಮಿಷಗಳಲ್ಲಿ ವ್ಯಾಪಾರ, ವೈಯಕ್ತಿಕ ಅಗತ್ಯಗಳಿಗಾಗಿ ಬದಲಿಸಬಹುದು. ಅಗತ್ಯವೆನಿಸಿದರೆ ಬಳಿಕ 3ನಿಮಿಷದಲ್ಲಿ 2 ವೀಲರ್ ಆಗಿ ಪರಿವರ್ತಿಸಬಹುದು.
ಹೊಸ ಮಾದರಿಯ ವಾಹನಗಳಲ್ಲಿ ತ್ರಿಚಕ್ರ ಮತ್ತು ದ್ವಿಚಕ್ರವಾಗಿ ಬದಲಾಯಿಸಬಹುದಾದ ಈ ವಾಹನಗಳು ವಿಭಿನ್ನ ಸಾಮರ್ಥ್ಯ ಹೊಂದಿವೆ. ತ್ರಿಚಕ್ರ ವಾಹನ(ಕಾರ್)ದಲ್ಲಿ 10ಕೆವಿ ಎಂಜಿನ್ ನೀಡಲಾಗಿದೆ. 11ಕೆಡಬ್ಲ್ಯೂಎ ಬ್ಯಾಟರಿ ನೀಡಲಾಗಿದೆ. ಸ್ಕೂಟರ್ 3ಕೆಡಬ್ಲ್ಯೂಎಂಜಿನ್ ಹೊಂದಿದೆ. ವೈಯಕ್ತಿಕ ಅಗತ್ಯಗಳಿಗೆ ಸರಿಹೊಂದುವಂತೆ 3.5 ಡಬ್ಲ್ಯೂಎಚ್ ಬ್ಯಾಟರಿಯನ್ನು ಅಳವಡಿಸಲಾಗಿದೆ.
ತ್ರಿಚಕ್ರ ವಾಹನ(ಕಾರ್)ದ ಗರಿಷ್ಠ ವೇಗ ಗಂಟೆಗೆ 50 ಕಿ.ಮೀ. 500 ಕೆಜಿ ವರೆಗೆ ತೂಕವನ್ನು ಸಾಗಿಸಬಹುದು. ದ್ವಿಚಕ್ರ ವಾಹನವು ಗರಿಷ್ಠ 60 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಬ್ಯಾಟರಿ ವ್ಯಾಪ್ತಿಯ ವಿವರಗಳು ತಿಳಿದಿಲ್ಲ.