ಕಾಸರಗೋಡು :ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಪ್ರತಿಷ್ಟಾ ದಿನಾಚರಣೆ, ಬಲಿವಾಡು ಕೂಟ, ಜೀರ್ಣೋದ್ದಾರ ಸಮಿತಿ ರಚನಾ ಮಹಾಸಭೆ ಮಧ್ಯಾಃನ 2.30ಕ್ಕೆ ಜರುಗಲಿದೆ. ಕ್ಷೇತ್ರ ತಂತ್ರಿವರ್ಯಾರಾದ ಉಚ್ಚಿಲ ಪದ್ಮನಾಭ ತಂತ್ರಿಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಎಡನೀರು ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಮಾರ್ಗ ದರ್ಶನದಲ್ಲಿ ನಡೆಯುವ ಮಹಾಸಭೆಯಲ್ಲಿ ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಗುವುದು. ಸಮಾರಂಭದಲ್ಲಿ ಊರ ಪರವೂರ ಭಕ್ತಭಿಮಾನಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.




