HEALTH TIPS

ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ 'ನವಚೇತನ' ದ್ವಿದಿನ ಸಹವಾಸ ಶಿಬಿರ

             ಕಾಸರಗೋಡು : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ವತಿಯಿಂದ ಸಂಘಟನೆಯ ಸದಸ್ಯರಿಗೆ 'ನವಚೇತನ' ಎಂಬ ನೂತನ ದ್ವಿದಿನ ಸಹವಾಸ ಶಿಬಿರವು ಕಾಸರಗೋಡಿನ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.

           ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟಿತ್ತೋಡಿ ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಶ್ರೀನಿವಾಸರಾವ್ ಪಿ. ಬಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಸುಕೇಶ್ ಎ, ಪ್ರಭಾವತಿ ಪುಂಡೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿಯವರಿಗೆ ಸಂಘಟನೆಯ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಇತ್ತೀಚೆಗೆ ಹುದ್ದೆಯಲ್ಲಿ ಭಡ್ತಿಯನ್ನು ಪಡೆದ ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ನಂದಿಕೇಶನ್ ಎನ್ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ ರವರಿಗೆ ಸಂಘಟನೆಯ ವತಿಯಿಂದ ಗೌರವಾರ್ಪಣೆ ನೀಡಲಾಯಿತು. ಸಂಘಟನೆಯ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು. ಕೇಂದ್ರ ಸಮಿತಿಯ ಕೋಶಾಧಿಕಾರಿ ಪದ್ಮಾವತಿ ಎಂ ಕಾರ್ಯಕ್ರಮ ನಿರೂಪಿಸಿದರು. 


           ಬಳಿಕ ಶಿಬಿರದ ಚಟುವಟಿಕೆಗಳು ಆರಂಭವಾಯಿತು. ಮೊದಲ ದಿನದ ಚಟುವಟಿಕೆಯಲ್ಲಿ ''ನಾವೊಂದಾಗುವ' ತರಗತಿಯನ್ನು ನಿವೃತ್ತ ಮುಖ್ಯ ಶಿಕ್ಷಕರಾದ ಗುರುಮೂರ್ತಿ, 'ಬದುಕು-ಬೆಳಕು' ತರಗತಿಯನ್ನು ಜೆ.ಸಿ.ಐ.ಯ ರಾಷ್ಟ್ರೀಯ ತರಬೇತುದಾರ ಯತೀಶ್ ಬಳ್ಳಾಲ್ ಎನ್. ಪಿ, 'ಆಟದ ಮೋಜು' ಚಟುವಟಿಕೆಯನ್ನು ನಿವೃತ್ತ ಶಿಕ್ಷಕರಾದ ಚೇವಾರು ವಿನೋದರವರು ನಡೆಸಿಕೊಟ್ಟರು. ಸಂಜೆ ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಬಳಿಕ ಶಿಬಿರಾಗ್ನಿ ನಡೆಯಿತು.

              ಮರುದಿನದ ಕಾರ್ಯಕ್ರಮವು ಬೆಳಿಗ್ಗೆ 'ಪರಿಸರ ನಡಿಗೆ'  ಹಾಗೂ 'ಪಕ್ಷಿ ವೀಕ್ಷಣೆ'ಯೊಂದಿಗೆ ಪ್ರಾರಂಭವಾಯಿತು. ಈ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ಸದಸ್ಯರಾದ ರಾಜು ಕ್ರಾಸ್ತಾ ಕಿದೂರುರವರು ನಡೆಸಿಕೊಟ್ಟರು. ಬಳಿಕ ನಡೆದ 'ಯೋಗಾಮೃತ' ಕಾರ್ಯಕ್ರಮದಲ್ಲಿ ಯೋಗ ಗುರುಗಳಾದ ಪುಂಡರಿಕಾಕ್ಷರ ಯೋಗಾಚಾರ್ಯ ಬೆಳ್ಳೂರುರವರು ಯೋಗ ತರಗತಿಯನ್ನು ನಡೆಸಿಕೊಟ್ಟರು. ಬಳಿಕ 'ನಮ್ಮೊಳಗಿನ ಮನಸ್ಸು-ಕನಸು' ಎಂಬ ತರಗತಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರಾದ ಡಾ. ರಶ್ಮಿರವರು ನಡೆಸಿಕೊಟ್ಟರು. ಬಳಿಕ ಸಂಘಟನೆಯ ಕುರಿತಾದ 'ಕನ್ನಡ ಅಧ್ಯಾಪಕ ಸಂಘಟನೆ ಮತ್ತು ನಾವು' ಎಂಬ ವಿಚಾರದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಉತ್ತಮ ಚರ್ಚೆ ಮೂಡಿಬಂದು ಸಂಘಟನೆಯನ್ನು ಬೆಳೆಸಲು ಸೂಕ್ತ ಮಾಡಲು ಸಲಹೆ ಸೂಚನೆಗಳನ್ನು ಹಲವರು ನೀಡಿದರು. ಜೊತೆಗೆ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ತರಗತಿಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಪಿ.ಬಿ ರವರು ನಡೆಸಿಕೊಟ್ಟರು.


           ಮಧ್ಯಾಹ್ನ ನಂತರ ರಂಗ ನಿರ್ದೇಶಕರಾದ ಕೃಷ್ಣಪ್ಪ ಬಂಬಿಲ, ನೀನಾಸಂ ಪದವಿದರೆ ಭವಾನಿ ಕಾಂಚನ, ಜನಪದ ಹಾಡುಗಾರ್ತಿ ಕುಮಾರಿ ನೀಲಾವತಿ ಮೊಗ್ರಾ ಹಾಗೂ ಕುಮಾರಿ ಕವಿತಾ ಸುಳ್ಯ ರವರಿಂದ 'ರಂಗಚಿನ್ನಾರಿ - ಅಭಿನಯ - ರಂಗ ಗೀತ ಗಾಯನ' ಕಾರ್ಯಕ್ರಮವು ನಡೆಯಿತು.

          ಸಂಜೆ 'ನವಚೇತನ' ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸರಾವ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಕೋಶಾಧಿಕಾರಿ ಪದ್ಮಾವತಿ ಎಂ, ಉಪಾಧ್ಯಕ್ಷರಾದ ಸುಕೇಶ್ ಎ, ಪ್ರಭಾವತಿ ಪುಂಡೂರು, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಂದ ಶಿಬಿರದ ಕುರಿತಾದ ಮೆಚ್ಚುಗೆಯ ಮಾತುಗಳು ಬಂದವು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಸ್ವಾಗತಿಸಿ, ಜೊತೆ ಕೋಶಾಧಿಕಾರಿ ಶರತ್ ಕುಮಾರ್ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries