ತಿರುವನಂತಪುರಂ: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಹುಲ್ ಮಂಕೂತಿಲ್ ಅವರ ಬಂಧನವನ್ನು ವಿರೋಧಿಸಿ ಯೂತ್ ಕಾಂಗ್ರೆಸ್ ಕ್ಲಿಫ್ ಹೌಸ್‍ಗೆ ನೈಟ್ ಮಾರ್ಚ್ ಘೋಷಿಸಿದೆ.
ಶುಕ್ರವಾರ ರಾತ್ರಿ ಎಂಟು ಗಂಟೆಗೆ ಸಮರ ಜ್ವಾಲ ಹೆಸರಿನಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಬೆಳಗ್ಗೆ ಪತ್ತನಂತಿಟ್ಟದ ಆತೂರಿನಲ್ಲಿರುವ ರಾಹುಲ್ ಮನೆಗೆ ಪೋಲೀಸರು ಸುತ್ತುವರಿದು ಬಂಧಿಸಿದ್ದರು. ನವ ಕೇರಳ ಸಮಾವೇಶದ ವೇಳೆ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಹಿಂಸಾಚಾರವನ್ನು ವಿರೋಧಿಸಿ ಡಿಸೆಂಬರ್ 20 ರಂದು ಯೂತ್ ಕಾಂಗ್ರೆಸ್ ನಡೆಸಿದ ಸೆಕ್ರೆಟರಿಯೇಟ್ ಮೆರವಣಿಗೆಯಲ್ಲಿ ಘರ್ಷಣೆ ಹೆಸರಲ್ಲಿ ಬಂಧನವಾಗಿದೆ. ನಂತರ ರಾಜ್ಯಾದ್ಯಂತ ಬಂಧನ ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದವು.





