ಕೊಚ್ಚಿ: ಮಾತಾ ಅಮೃತಾನಂದಮಯಿ ದೇವಿ ಅವರು ಅಯೋಧ್ಯೆಯಿಂದ ಆಗಮಿಸಿದ ಅಕ್ಷತೆಯನ್ನು ಸ್ವೀಕರಿಸಿದರು. ಹಿರಿಯ ಆರೆಸ್ಸೆಸ್ ಪ್ರಚಾರಕ ಎಸ್. ಸೇತುಮಾಧವನ್ ಅವರು ಮಾತಾ ಅಮೃತಾನಂದಮಯಿ ದೇವಿಗೆ ಅಕ್ಷತೆ ಹಸ್ತಾಂತರಿಸಿದರು. ಅಮೃತಾನಂದಮಯಿ ಮಠದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಅಕ್ಷತೆಯನ್ನು ಪುಷ್ಪವೃಷ್ಟಿಗೈದು ಸ್ವೀಕರಿಸಲಾಯಿತು. ಅಕ್ಷತೆಗೆ ಅಮೃತಾನಂದಮಯಿಯ ನಮಸ್ಕರಿಸಿದ ದೃಶ್ಯವೂ ಹೊರಬಿದ್ದಿದೆ. ನಟ ನರೇನ್, ನಿರ್ದೇಶಕ ವಿನಯನ್ ಮತ್ತು ಬಾಲನಟ ದೇವಾನಂದ ಅವರಿಗೂ ಇಂದು ಅಕ್ಷತೆ ಹಸ್ತಾಂತರಿಸಲಾಯಿತು.





