ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಜಾರ್ಜಿಯಾ ಪ್ರವಾಸದಿಂದ ವಾಪಸಾಗುತ್ತಿದ್ದಾಗ ಮಂಗಳವಾರ ರಾತ್ರಿ ಹಠಾತ್ ಎದುರಾದ ಸುಂಟರ ಗಾಳಿಯಿಂದಾಗಿ ಅವರಿದ್ದ ಏರ್ ಫೋರ್ಸ್ -2 ವಿಮಾನವನ್ನು ವಾಷಿಂಗ್ಟನ್ ಪ್ರದೇಶದ ವಿಮಾನ ನಿಲ್ದಾಣದ ಕಡೆಗೆ ಮಾರ್ಗ ಬದಲಿಸಿದ ಘಟನೆ ನಡೆದಿದೆ.
0
samarasasudhi
ಜನವರಿ 11, 2024
ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಜಾರ್ಜಿಯಾ ಪ್ರವಾಸದಿಂದ ವಾಪಸಾಗುತ್ತಿದ್ದಾಗ ಮಂಗಳವಾರ ರಾತ್ರಿ ಹಠಾತ್ ಎದುರಾದ ಸುಂಟರ ಗಾಳಿಯಿಂದಾಗಿ ಅವರಿದ್ದ ಏರ್ ಫೋರ್ಸ್ -2 ವಿಮಾನವನ್ನು ವಾಷಿಂಗ್ಟನ್ ಪ್ರದೇಶದ ವಿಮಾನ ನಿಲ್ದಾಣದ ಕಡೆಗೆ ಮಾರ್ಗ ಬದಲಿಸಿದ ಘಟನೆ ನಡೆದಿದೆ.
ರಾತ್ರಿ ಪ್ರತಿಕೂಲ ಹವಾಮಾನದಿಂದಾಗಿ ಏರ್‌ಫೋರ್ಸ್ -2 ವಿಮಾನದ ಮಾರ್ಗವನ್ನು ಅಟ್ಲಾಂಟಾದ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಿಂದ ಡಲ್ಲಾಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬದಲಾಯಿಸಲಾಯಿತು ಎಂದು ಪತ್ರಿಕಾ ಕಾರ್ಯದರ್ಶಿ ಕರ್ಸ್ಟನ್ ಅಲೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರಿ ಬಿರುಗಾಳಿ ಮತ್ತು ಮಳೆಯಿಂದಾಗಿ ವಿಮಾನದ ದಿಕ್ಕನ್ನು ಬದಲಿಸಬೇಕಾಯಿತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೆಸರು ಬಯಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.