ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರತದ ಭಾಗಕ್ಕೂ ವ್ಯಾಪಿಸಿದೆ. ಬೆಂಕಿಯ ನೆಪದಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನಗಳನ್ನು ತಡೆಯಲು ಭದ್ರತಾ ಪಡೆಗಳು ಸಜ್ಜಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
0
samarasasudhi
ಜನವರಿ 06, 2024
ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರತದ ಭಾಗಕ್ಕೂ ವ್ಯಾಪಿಸಿದೆ. ಬೆಂಕಿಯ ನೆಪದಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನಗಳನ್ನು ತಡೆಯಲು ಭದ್ರತಾ ಪಡೆಗಳು ಸಜ್ಜಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಬೆಂಕಿ ಕಾಣಿಸಿಕೊಂಡಿದ್ದು, ಮೆಂಧರ್ ಉಪವಿಭಾಗದ ಬಾಲಾಕೋಟ್ ಭಾಗಕ್ಕೂ ಹರಡಿದೆ.
ಬೆಂಕಿಯ ನೆಪದಲ್ಲಿ ಉಗ್ರರು ಒಳನುಸುಳುವ ಸಾಧ್ಯತೆಗಳಿದ್ದು, ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಎಚ್ಚರಿಕೆಯನ್ನು ವಹಿಸಲಾಗಿದೆ. ಎಲ್‌ಒಸಿಯಲ್ಲಿ ಕಾವಲು ಕಾಯುತ್ತಿರುವ ಸೇನಾ ಪಡೆಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.