ನವದೆಹಲಿ: ನರಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಶಸ್ತ್ರಚಿಕಿತ್ಸೆ ನಂತರ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವಂತಾಗಬೇಕು. ಅಂತಹ ವಿಧಾನವನ್ನು ವೈದ್ಯರು ಅಳವಡಿಸಿಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.
0
samarasasudhi
ಜನವರಿ 28, 2024
ನವದೆಹಲಿ: ನರಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಶಸ್ತ್ರಚಿಕಿತ್ಸೆ ನಂತರ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವಂತಾಗಬೇಕು. ಅಂತಹ ವಿಧಾನವನ್ನು ವೈದ್ಯರು ಅಳವಡಿಸಿಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.
ನರರೋಗಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ವೇಳೆ, ರೋಗಿಗೆ ಕಡಿಮೆ ತೊಂದರೆ ಆಗುವಂತಹ ವಿಧಾನವನ್ನು ಅನುಸರಿಸಿದ ಸಂದರ್ಭಗಳಲ್ಲಿ ಅವರು ಆಸ್ಪತ್ರೆಯಲ್ಲಿ ಕಳೆಯಬೇಕಾದ ಅವಧಿಯು ಶೇ 50ರಷ್ಟು ತಗ್ಗಿತ್ತು ಎಂಬುದನ್ನು ಇತ್ತೀಚಿನ ಅಂಕಿ-ಅಂಶಗಳು ಹೇಳುತ್ತವೆ.
ಮಿದುಳು ಗಡ್ಡೆ ಪತ್ತೆ ವಿಧಾನ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಕೆಲ ವರ್ಷಗಳ ಹಿಂದೆ, ಈ ತೊಂದರೆಯನ್ನು ನಿವಾರಿಸುವುದು ಕಷ್ಟ ಎಂಬಂತಹ ಸ್ಥಿತಿಯಿತ್ತು. ಈಗ ಲಭ್ಯವಿರುವ ಕೆಲ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ವಿಧಾನಗಳು ರೋಗಿಗಳ ಪಾಲಿಗೆ ಆಶಾಕಿರಣವಾಗಿವೆ ಎಂದು ತಜ್ಞವೈದ್ಯರು ಹೇಳಿದರು.
'ಮಿದುಳು ಗಡ್ಡೆ ಶಸ್ತ್ರಚಿಕಿತ್ಸೆ ವಿಷಯಕ್ಕೆ ಬಂದಾಗ, ಕೀಹೋಲ್ ಸರ್ಜರಿ, ರೋಬೊಟಿಕ್ ಸರ್ಜರಿ ರೋಗಿಗಳ ಪಾಲಿಗೆ ವರದಾನವಾಗಿವೆ. ಇಂತಹ ಶಸ್ತ್ರಚಿಕಿತ್ಸೆಗಳಿಂದ ರೋಗಿಗಳು ಕಡಿಮೆ ನೋವು ಅನುಭವಿಸುತ್ತಾರಲ್ಲದೇ, ಅವರು ಅಲ್ಪಾವಧಿಯಲ್ಲಿಯೇ ಚೇತರಿಸಿಕೊಳ್ಳುತ್ತಾರೆ' ಎಂದು ವೈಶಾಲಿಯಲ್ಲಿರುವ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನ್ಯೂರೊಸರ್ಜರಿ ವಿಭಾಗದ ಹಿರಿಯ ನಿರ್ದೇಶಕ ಡಾ.ಮನೀಶ್ ವೈಶ್ ತಿಳಿಸಿದರು.