ತಿರುವನಂತಪುರ: ಸರ್ಕಾರದ ದುರಾಡಳಿತ ಮತ್ತು ದುಂದುವೆಚ್ಚದಿಂದ ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಸನ್ ಹೇಳಿದ್ದಾರೆ.
ಆರು ತಿಂಗಳಿಂದ ಸಪ್ಲೈಕೋಗೆ ಹಣ ನೀಡಿಲ್ಲ. ಪಂಚಾಯತಿಯಲ್ಲಿ ಹುಲ್ಲು ಕಡಿದರೂ ಹಣ ಕೊಡುವಂತಿಲ್ಲ. ವಿತ್ತ ಸಚಿವರು ಖಜಾನೆಗೆ ಬೀಗ ಹಾಕಿಕೊಂಡು ಜೇಬಿನಲ್ಲಿ ಕೀಲಿಯೊಂದಿಗೆ ತಿರುಗಾಡುತ್ತಾರೆ. ಚರಂಡಿ ನಿರ್ಮಿಸಲು ಕೂಡ ಹಣವಿಲ್ಲ. ಒಂದು ಲಕ್ಷ ಪಿಂಚಣಿದಾರರು ತಮ್ಮ ಪಿಂಚಣಿ ಬಾಕಿ ಸಿಗದೆ ಸಂಕಷ್ಟದಲ್ಲಿದ್ದಾರೆ.
ವಿತ್ತ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರೋಪಿಸಿದರು. ತೆರಿಗೆ ವಂಚಕರ ಸ್ವರ್ಗವಾಗಿ ಕೇರಳ ಮಾರ್ಪಟ್ಟಿದೆ. ಜಿಎಸ್‍ಟಿ ಅಧಿಕಾರಿಗಳು ಸುಮ್ಮನಿದ್ದಾರೆ. ನಾಯನಾರ್ ಆಡಳಿತದ ನಂತರವೇ ಎ.ಕೆ.ಆಂಟನಿ ಬಿಗಿಯಾದ ಅಂಗಿ ಧರಿಸಲು ಹೇಳಿದ್ದರು. ಇಂದಿನ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ವಿಧಾನಸಭೆಯಲ್ಲಿ ಆರ್ಥಿಕ ಬಿಕ್ಕಟ್ಟು ಕುರಿತ ತುರ್ತು ನಿರ್ಣಯದ ಚರ್ಚೆಯ ವೇಳೆ ವಿ.ಡಿ.ಸತೀಶನ್ ಮಾತನಾಡುತ್ತಿದ್ದರು.
ಆದರೆ, ಕೇಂದ್ರವು ಕೇರಳದ ಬಗ್ಗೆ ಉತ್ತಮ ನೀತಿಯನ್ನು ಹೊಂದಿದೆ ಎಂದು ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿದ್ದಾರೆ.ರಾಜ್ಯವು ಜಡ ಸ್ಥಿತಿಯಲ್ಲಿಲ್ಲ ಎಂದುತ್ತರಿಸಿದರು.
ಬೆಕ್ಕು ಖಜಾನೆಯಲ್ಲಿ ಮಲಗಿಲ್ಲ. ಎಲ್ಲಾ ಖರ್ಚುಗಳನ್ನು ಪಾವತಿಸಲಾಗಿದೆ. ಕೇಂದ್ರದಿಂದ 57,000 ಕೋಟಿ ಬರಬೇಕಿದೆ. ಚರ್ಚೆಯಲ್ಲಿ ಕೇರಳವನ್ನು ಮಾತ್ರ ದೂರುವ ವಿಪಕ್ಷಗಳ ನಿಲುವು ದುರದೃಷ್ಟಕರವಾಗಿದ್ದು, ಎರಡು ವಷರ್Àಗಳಲ್ಲಿ ತೆರಿಗೆ ಆದಾಯ 47,000 ಕೋಟಿ ರೂ.ಗಳಿಂದ 71,000 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.
ಚರ್ಚೆಯ ಕೊನೆಯಲ್ಲಿ ಪ್ರತಿಪಕ್ಷಗಳು ಸದನದಿಂದ ನಿರ್ಗಮಿಸಿದವು. ಆಗ ಸಭಾಧ್ಯಕ್ಷ ಎಎನ್ ಶಂಸೀರ್ ಅವರು ಮಂಡನೆ ತಳ್ಳಿರುವುದಾಗಿ ಘೋಷಿಸಿದರು.


