HEALTH TIPS

ಇತ್ತೀಚೆಗೆ ಹೆಚ್ಚಾಗುತ್ತಿದೆ ಕಿವಿ ಸೋಂಕು, ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು, ತಜ್ಞರ ಸಲಹೆಯೇನು?

 ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಫ್ಲೂ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಅನೇಕ ರೋಗಿಗಳಲ್ಲಿ ಕಾಣಬರುವ ವಿವಿಧ ರೋಗಲಕ್ಷಣಗಳು ಜನರ ನಿದ್ದೆಗೆಡಿಸಿದೆ. ಶೀತ, ನೆಗಡಿ ಸಂಬಂಧಿತ ಅನಾರೋಗ್ಯ ಸಮಸ್ಯೆಗಳು ಜನರನ್ನು ಹೆಚ್ಚಾಗಿ ಬಾಧಿಸುತ್ತಿದ್ದು, ಅದರಲ್ಲೂ ಕಿವಿ ನೋವಿಗೆ ಸಂಬಧಿಸಿದಂತಹ ಪ್ರಕರಣಗಳು ನಗರದಲ್ಲಿ ಹೆಚ್ಚು ಕಂಡುಬರುತ್ತಿದೆ ಎಂದು ವೈದ್ಯರು ಹೇಳುತ್ತಾರೆ.

ಅದಲ್ಲದೆ ಈ ಸಮಸ್ಯೆಗಳಿಗೆ ಬಹುತೇಕ ಮಂದಿ ಮನೆಮದ್ದುಗಳ ಮೊರೆ ಹೋಗುತ್ತಾರೆ. ಅದರ ಪರಿಣಾಮವಾಗಿ ಸೋಂಕು ಉಲ್ಬಣಗೊಳ್ಳುವುದು, ಗಂಟಲಿಗೆ ಸಂಬಂಧಿತ ಸಮಸ್ಯೆಗಳು ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿವೆ. ಚಳಿಗಾಲದಲ್ಲಿ ಎದುರಾಗುವ ಈ ಸಮಸ್ಯೆಗಳ ಕುರಿತಾಗಿ ಕಿಂಡರ್ ಆಸ್ಪತ್ರೆಯ ಹಿರಿಯ ಇಎನ್‌ಟಿ ತಜ್ಞ ವೈದ್ಯೆ ಡಾ. ಸುನಿತಾ ಮಾಧವನ್ ಅವರು ಮಹತ್ವದ ಮಾಹಿತಿಗಳನ್ನ ಹೊರಹಾಕಿದ್ದಾರೆ.

ಕಿವಿ ನೋವಿಗೆ ಮನೆಮದ್ದು ಹಾಕಲೇಬೇಡಿ
"ಯಾವ ಮುನ್ನೆಚ್ಚರಿಕೆಯೂ ಇಲ್ಲದೆ ಈ ರೀತಿಯ ಕಿವಿ ನೋವಿನ ಸಮಸ್ಯೆಗಳಿಗೆ ಮನೆ ಮದ್ದಿನ ಮೊರೆ ಹೋಗುವುದು ತುಂಬಾ ಅಪಾಯಕಾರಿ. ಅದರಲ್ಲೂ ಅನೇಕರು ಪರಿಹಾರವಾಗಿ ಮನೆಮದ್ದುಗಳಾದ ಬಾಮ್, ಮೊಸರು, ಉಪ್ಪು ನೀರು, ಸಾಬೂನು ನೀರು ಮತ್ತು ಬೆಳ್ಳುಳ್ಳಿಯನ್ನು ಬಳಸುತ್ತಾರೆ. ಆದರೆ ಇದರಿಂದಾಗಿ ಕಿವಿಯಲ್ಲಿ ರಕ್ತಸ್ತ್ರಾವ ಉಂಟಾಗುತ್ತದೆ. ಉದಾಹರಣೆಗೆ ಸೈನಟಿಸ್ ಮತ್ತು ಕಿವಿ ನೋವಿನಿಂದ ಬಳಲುತ್ತಿದ್ದ 10 ವರ್ಷದ ಮಗುವಿನ ಕಿವಿಗೆ ಲವಣಯುಕ್ತ ನೀರನ್ನು ಹಾಕಲಾಗಿತ್ತು. ಆದರೆ ಇದರಿಂದ ತೀವ್ರವಾದ ಸೈನಸೈಟಿಸ್ ಸಮಸ್ಯೆ ಕಾಣಿಸಿಕೊಂಡಿತು. ಅಲ್ಲದೆ ಇಂತಹ ಸ್ವಯಂ ಚಿಕಿತ್ಸಾ ವಿಧಾನದಿಂದ ಕಿವಿಯ ಒಳ ಪದರಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಮದ್ದುಗಳ ಬಳಕೆ ನಿಜಕ್ಕೂ ಸೂಕ್ತವಲ್ಲ. ಕಿವಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಕೂಡಲೇ ಇಎನ್‌ಟಿ ತಜ್ಞರನ್ನು ಭೇಟಿಯಾಗುವುದು ಅತ್ಯುತ್ತಮ ಪರಿಹಾರ", ಎನ್ನುತ್ತಾರೆ ಡಾ ಸುನಿತಾ.

ಕಿವಿ ನೋವು ಯಾವೆಲ್ಲಾ ಕಾರಣಗಳಿಂದ ಉಂಟಾಗುವುದು?
ಒಣ ತಂಪಾದ ಗಾಳಿ, ಒಳಾಂಗಣ ಚಟುವಟಿಕೆಗಳು ಮತ್ತು ಜನಸಂದಣಿಯಿಂದಾಗಿ ಸೋಂಕುಗಳ ಹರಡುವಿಕೆಯಿಂದಲೂ ಕಿವಿ ನೋವಿನ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಇದರಿಂದಾಗಿ ಅಡೆನೊಟಾನ್ಸಿಲಿಟಿಸ್, ಡಯಾಬಿಟಿಸ್, ಅಲರ್ಜಿ, ಅಸ್ತಮಾ, ಬ್ರಾಂಕೈಟಿಸ್, ಥೈರಾಯ್ಡ್ ಮತ್ತು ಇತರೆ ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು.

ಕಿವಿ ಸೋಂಕಿನ ಲಕ್ಷಣಗಳು
ಮೂಗು ಸೋರುವಿಕೆ, ಮೂಗು ಕಟ್ಟುವಿಕೆ, ಸೀನು, ಕೆಮ್ಮು, ಗಂಟಲು ನೋವು, ತಲೆನೋವು, ಆಯಾಸ, ಧ್ವನಿಯಲ್ಲಿ ಬದಲಾವಣೆ, ಕಿವಿ ನೋವು, ಮೂಗುನಿಂದ ರಕ್ತಸ್ರಾವ ಈ ಬಗೆಯ ಲಕ್ಷಣಗಳು ಕಂಡು ಬರುವುದು. ಕೆಲವರಲ್ಲಿ ಈ ರೀತಿಯ ಸಮಸ್ಯೆಗಳು ಬಹುಬೇಗ ಮಾಯವಾಗುತ್ತವೆ. ಆದರೆ ಇನ್ನೂ ಕೆಲವರಲ್ಲಿ ಸೈನಟಿಸ್, ಕಿವಿ ಸೋಂಕು ಮತ್ತು ಬ್ರಾಂಕೈಟಿಸ್, ಅಸ್ತಮಾ, ಅಡೆನೊಟಾನ್ಸಿಲೈಟಿಸ್, ಗೊರಕೆ ಮತ್ತು ನಿದ್ರೆಯಲ್ಲಿ ಉಸಿರುಗಟ್ಟುವಿಕೆಯಂತಹ ಸಮಸ್ಯೆಗಳಿಗೆ ಎಡೆಮಾಡಿಕೊಡುವುದನ್ನು ಕಾಣಬಹುದು.

ಕಿವಿ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ.
ಡಾ. ಸುನಿತಾ ಮಾಧವನ್ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ, ನವೆಂಬರ್ 1 ರಿಂದ ಡಿಸೆಂಬರ್ 15,2023ರ ವರೆಗಿನ 45 ದಿನಗಳ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಶೇ.60ರಷ್ಟು ರೋಗಿಗಳಲ್ಲಿ ಉಸಿರಾಟದ ಸಮಸ್ಯೆ ಕಂಡು ಬರುತ್ತಿದೆಯಂತೆ. ಅವರಲ್ಲಿ ಕಿವಿ ನೋವು, ಸೈನಟಿಸ್, ಅಡೆನೊಡಿಟಿಸ್, ಉಸಿರಾಟದ ಸಮಸ್ಯೆ ಈ ಬಗೆಯ ಲಕ್ಷಣಗಳು ಕಂಡು ಬರುತ್ತಿದೆ.

ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಬೇಡ
ತೀವ್ರವಾದ ತಲೆ ನೋವು, ಮುಖದ ನೋವು, ಮುಖದಲ್ಲಿ ಊತ, ತೀವ್ರವಾದ ಗಂಟಲು ನೋವು ಮತ್ತು ಜ್ವರದಿಂದ ಬಳಲುತ್ತಿದ್ದರೆ ಕೂಡಲೇ ವೈದ್ಯರಿಗೆ ತೋರಿಸಿ, ನಿರ್ಲಕ್ಷ್ಯ ಬೇಡ.

ಈ ಬಗ್ಗೆ ಜಾಗ್ರತೆವಹಿಸಿ
, "ಶೀತ, ಕೆಮ್ಮು ಕಾಣಿಸಿಕೊಂಡರೆ ಮಾಸ್ಕ್ ಧರಿಸಿ
* ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆಯಂಶ ಹೆಚ್ಚಾಗದಂತೆ ನೋಡಿಕೊಳ್ಳಿ.
* ಅಸ್ತಮಾ ಮತ್ತು ಅಲರ್ಜಿಯಿಂದ ಬಳಲುತ್ತಿರುವವರು ಗಾಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ, ಶೀತ ಲಕ್ಷಣಗಳು ಕಂಡುಬಂದಲ್ಲಿ ಸೂಕ್ತ ತಜ್ಞರಿಗೆ ತೋರಿಸಿ.
* ಶೀತವಾಗಿದ್ದರೆ ತಾಜಾ ಹಣ್ಣು, ತರಕಾರಿ ಸೇವನೆ ಮಾಡಬೇಡಿ.
* ಕಿವಿನೋವು ಇದ್ದಾಗ ಟೂ ವ್ಹೀಲರ್‌ನಲ್ಲಿ ಹೋಗುವುದು, ವಿಮಾನ ಪ್ರಯಾಣ ಮಾಡುವುದು ಮಾಡದಿದ್ದರೆ ಒಳ್ಳೆಯದು.
* ಮುಖ ಊದಿಕೊಂಡರೆ ಕೂಡಲೇ ಇಎನ್‌ಟಿ ತಜ್ಞರನ್ನು ಭೇಟಿ ಮಾಡಿ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries