ನವದೆಹಲಿ:ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಯುತ್ತಿರುವ ಪರಿಣಾಮ ಭಾರತೀಯ ನೌಕಾಪಡೆಯು ಕೇಂದ್ರ/ಉತ್ತರ ಅರೇಬ್ಬೀ ಸಮುದ್ರದಲ್ಲಿ ಭದ್ರತೆ ಮತ್ತು ಕಣ್ಗಾವಲು ಹೆಚ್ಚಿಸಿದೆ ಎಂದು ನೌಕಾಪಡೆಯ ಹೇಳಿಕೆ ತಿಳಿಸಿದೆ ಎಂದು indianexpress ವರದಿ ಮಾಡಿದೆ.
0
samarasasudhi
ಜನವರಿ 01, 2024
ನವದೆಹಲಿ:ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಯುತ್ತಿರುವ ಪರಿಣಾಮ ಭಾರತೀಯ ನೌಕಾಪಡೆಯು ಕೇಂದ್ರ/ಉತ್ತರ ಅರೇಬ್ಬೀ ಸಮುದ್ರದಲ್ಲಿ ಭದ್ರತೆ ಮತ್ತು ಕಣ್ಗಾವಲು ಹೆಚ್ಚಿಸಿದೆ ಎಂದು ನೌಕಾಪಡೆಯ ಹೇಳಿಕೆ ತಿಳಿಸಿದೆ ಎಂದು indianexpress ವರದಿ ಮಾಡಿದೆ.
ಡಿಸೆಂಬರ್ 31ರಂದು ರವಿವಾರ ಹೊರಡಿಸಿದ ಹೇಳಿಕೆಯಲ್ಲಿ ನೌಕಾಪಡೆಯು, "ಯಾವುದೇ ಘಟನೆಯ ಸಂದರ್ಭದಲ್ಲಿ ಕಡಲ ಭದ್ರತಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮತ್ತು ವಾಣಿಜ್ಯ ಹಡಗುಗಳಿಗೆ ನೆರವು ನೀಡಲು ವಿಧ್ವಂಸಕ ಕೃತ್ಯಗಳನ್ನು ತಡೆಯುವ ಗುಂಪುಗಳನ್ನು ಸಮುದ್ರದಲ್ಲಿ ನಿಯೋಜಿಸಲಾಗಿದೆ.
ಡಿಸೆಂಬರ್ 23 ರಂದು, ಪೋರಬಂದರ್‌ನಿಂದ ಸುಮಾರು 220 ನಾಟಿಕಲ್ ಮೈಲುಗಳ ನೈಋತ್ಯದಲ್ಲಿ ರಾಸಾಯನಿಕ ಟ್ಯಾಂಕರ್ ಮೇಲೆ ಡ್ರೋನ್ ದಾಳಿ ವರದಿಯಾಗಿತ್ತು. ನೌಕೆಯು ಭಾರತದ ಕರಾವಳಿಯನ್ನು ತಲುಪಿದ ನಂತರ ವಿವಿಧ ಏಜೆನ್ಸಿಗಳ ಜಂಟಿ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.