HEALTH TIPS

ಮೊನಲಿಸಾ ಕಲಾಕೃತಿ ಮೇಲೆ ಸೂಪ್‌ ಚೆಲ್ಲಿ ಘೋಷಣೆ ಕೂಗಿದ ಪರಿಸರವಾದಿಗಳು

                ಪ್ಯಾರಿಸ್‌: ವಿಶ್ವ ಪ್ರಸಿದ್ಧ ಕಲಾಕೃತಿ ಮೊನಾಲಿಸಾದ ರಕ್ಷಣಾ ಪರದೆ ಮೇಲೆ ಸೂಪ್‌ ಚೆಲ್ಲಿ ಘೋಷಣೆ ಕೂಗುವ ಮೂಲಕ ಪರಿಸರವಾದಿಗಳಿಬ್ಬರು ಪ್ರತಿಭಟನೆ ನಡೆಸಿದ್ದಾರೆ.

              ಘಟನೆಗೆ ಸಂಬಂಧಪಟ್ಟ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಬ್ಬರು ಮಹಿಳೆಯರು ಕಲಾಕೃತಿ ಪಕ್ಕದಲ್ಲಿ ಒಂದು ಕೈ ಎತ್ತಿ ನಿಂತಿದ್ದಾರೆ.

                 ಅವರ ಟೀ-ಶರ್ಟ್‌ ಮೇಲೆ FOOD RIPOSTE ಎಂದು ಬರೆದಿರುವುದು ಕಾಣಬಹುದಾಗಿದೆ.

'ಯಾವುದು ಮುಖ್ಯ ನಮಗೆ? ಕಲಾಕೃತಿಯೋ? ಆರೋಗ್ಯಕರ, ಸುಸ್ಥಿರ ಆಹಾರ ಪದ್ಧತಿ ಹೊಂದುವುದೋ?' ಎಂದು ಅವರು ಕೂಗಿದ್ದಾರೆ.

              'ದೇಶದ ಕೃಷಿ ವ್ಯವಸ್ಥೆ ಅಧಃಪತನಕ್ಕೆ ಇಳಿದಿದೆ. ನಮ್ಮ ರೈತರು ಸಾಯುತ್ತಿದ್ದಾರೆ' ಎಂದು ಹೇಳಿದ್ದಾರೆ.


               'ಜಾಗತಿಕ ತಾಪಮಾನ ನಿಯಮಗಳನ್ನು ಫ್ರೆಂಚ್‌ ಸರ್ಕಾರ ಮುರಿಯುತ್ತಿದೆ. ರೈತರಿಗೆ ಉತ್ತಮ ಆದಾಯ ನೀಡುವ ಮೂಲಕ ಜನರಿಗೆ ಆರೋಗ್ಯಕರವಾದ ಆಹಾರ ಒದಗಿಸುವ ಕೆಲಸವನ್ನು ಫ್ರೆಂಚ್‌ ಸರ್ಕಾರ ಮಾಡಬೇಕಿದೆ' ಎಂದು FOOD RIPOSTE ಗ್ರೂಪ್‌ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.

ಕಡಿಮೆ ಕೂಲಿ, ಆಮದು ವಿರುದ್ಧ ಫ್ರೆಂಚ್‌ ರೈತರು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries