HEALTH TIPS

ಹುತಿ ಉಗ್ರರ ದಾಳಿ: ಭಾರತೀಯರಿದ್ದ ವಾಣಿಜ್ಯ ಹಡಗನ್ನು ರಕ್ಷಿಸಿದ ಭಾರತದ ಯುದ್ಧನೌಕೆ

               ವದೆಹಲಿ: ಗಲ್ಫ್‌ ಆಫ್ ಏಡನ್ ಕೊಲ್ಲಿಯಲ್ಲಿ ಇರಾನ್ ಬಂಡುಕೋರರ ಕ್ಷಿಪಣಿ ದಾಳಿಗೆ ತುತ್ತಾಗಿ ವಾಣಿಜ್ಯ ನೌಕೆಯಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಭಾರತದ ಯುದ್ಧನೌಕೆ ಐಎನ್‌ಎಸ್ ವಿಶಾಖಪಟ್ಟಣ ನಂದಿಸಿದೆ.

             ವಾಣಿಜ್ಯ ಹಡಗಿನಿಂದ ನೆರವಿಗಾಗಿ ಬಂದ ಮನವಿಯ ಮೇರೆಗೆ ಯುದ್ಧನೌಕೆ ಕಾರ್ಯಾಚರಣೆ ನಡೆಸಿದೆ. ಇದರಲ್ಲಿ 22 ಭಾರತೀಯರು ಸಹ ಇದ್ದರು. ಕೆಂಪು ಸಮುದ್ರ ಮತ್ತು ಗಲ್ಫ್‌ ಆಫ್ ಏಡನ್ ಕೊಲ್ಲಿಯು ವಾಣಿಜ್ಯ ಚಟುವಟಿಕೆಗಳಿಗೆ ಪ್ರಮುಖ ಜಲಮಾರ್ಗವಾಗಿದ್ದು, ಇತ್ತೀಚಿನ ದಿನಗಳಲ್ಲಿ ಇಲ್ಲಿ ಗಂಭೀರ ಭದ್ರತಾ ಆತಂಕ ಎದುರಾಗುತ್ತಿದೆ.


              ಮಾರ್ಷಲ್ ದ್ವೀಪದಲ್ಲಿ ಎಂ.ವಿ. ಮಾರ್ಲಿನ್ ಲುವಾಂಡಾ ವಾಣಿಜ್ಯ ಹಡಗಿನ ಮೇಲೆ ಹುತಿ ಬಂಡುಕೋರರು ಖಂಡಾಂತರ ಕ್ಷಿಪಣಿಯ ದಾಳಿ ನಡೆಸಿರುವುದಾಗಿ ಅಮೆರಿಕ ಸೆಂಟ್ರಲ್ ಕಮಾಂಡ್ ಹೇಳಿದೆ.

                      ಹಡಗಿನಿಂದ ನೆರವಿಗಾಗಿ ಕರೆ ಬಂದ ಕೂಡಲೇ ಭಾರತದ ಕ್ಷಿಪಣಿ ವಿರೋಧಿ ಯುದ್ಧನೌಕೆ ಐಎನ್‌ಎಸ್ ವಿಶಾಖಪಟ್ಟಣಂ ಅನ್ನು ಕಾರ್ಯಾಚರಣೆಗೆ ಇಳಿಸಲಾಗಿತ್ತು.

            ಎಂ.ವಿ ಮಾರ್ಲಿನ್ ಲುವಾಂಡಾ ಸಿಬ್ಬಂದಿ ಜೊತೆ ಸೇರಿ ಆರು ಗಂಟೆಗಳ ಸತತ ಪ್ರಯತ್ನದ ಬಳಿಕ ಭಾರತೀಯ ನೌಕಾ ಅಗ್ನಿಶಾಮಕ ತಂಡವು ಯಶಸ್ವಿಯಾಗಿ ಬೆಂಕಿಯನ್ನು ಹತೋಟಿಗೆ ತಂದಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್ ಅವರು ಹೇಳಿದರು.

            ಹಡಗು ಬ್ರಿಟನ್ ಮೂಲದ ಓಸಿಯೊನಿಕ್ಸ್ ಸರ್ವಿಸಸ್ ಒಡೆತನದಲ್ಲಿದೆ. ಇದನ್ನು ಸಿಂಗಾಪುರ ಮೂಲದ ಟ್ರಾಫಿಗುರಾ ಸಂಸ್ಥೆ ನಿರ್ವಹಿಸುತ್ತಿದೆ.

                ಹುತಿ ಬಂಡುಕೋರರು ಕಳೆದ ನವೆಂಬರ್‌ ತಿಂಗಳಿನಿಂದ ಕೆಂಪು ಸಮುದ್ರ ಮತ್ತು ಪಕ್ಕದ ಪ್ರದೇಶಗಳಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಅವರು ಈ ದಾಳಿಗಳನ್ನು ಸಂಘಟಿಸುತ್ತಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries