HEALTH TIPS

ಪ್ರಧಾನಿ ಸಮ್ಮುಖದಲ್ಲಿ ವಿವಾಹಿತರಾದ ಭಾಗ್ಯ-ಶ್ರೇಯಸ್

             ತ್ರಿಶೂರ್: ಬಿಜೆಪಿ ನೇತಾರ, ಖ್ಯಾತ ಚಲಚಿತ್ರ ನಟ ಸುರೇಶ್ ಗೋಪಿ ಅವರ ಪುತ್ರಿ ಭಾಗ್ಯ ಅವರ ವಿವಾಹ ಬುಧವಾರ ಗುರುವಾಯೂರಿನಲ್ಲಿ ನೆರವೇರಿತು.

               ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿದ್ದು ವಿಶೇಷವಾಗಿತ್ತು. ಸಮಾರಂಭದ ನಂತರ, ಪ್ರಧಾನ ಮಂತ್ರಿಗಳು ಭಾಗ್ಯ ಮತ್ತು ಶ್ರೇಯಸ್ ಅವರನ್ನು ಆಶೀರ್ವದಿಸಿದರು.

            ಭಾಗ್ಯ ತಂದೆ ಸುರೇಶ್ ಗೋಪಿಯ ಕೈ ಹಿಡಿದು ಕಿತ್ತಳೆ ಬಣ್ಣದ ಸೀರೆಯಲ್ಲಿ ವಿವಾಹ  ವೇದಿಕೆಯನ್ನು ತಲುಪಿದರು. ಆತ್ಮೀಯರ ಸಮ್ಮುಖದಲ್ಲಿ ಶ್ರೇಯಸ್ ಭಾಗ್ಯಳ ಕೊರಳಿಗೆ ಕರಿಮಣಿ ಕಟ್ಟಿದರು. ಚಲಚಿತ್ರ ನಟರಾದ ಮೋಹನ್ ಲಾಲ್, ಮಮ್ಮುಟ್ಟಿ, ಖುಷ್ಬು ಸುಂದರ್, ಜಯರಾಂ, ದಿಲೀಪ್ ಸೇರಿದಂತೆ ಚಿತ್ರರಂಗದ ಅನೇಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


         ವಧು-ವರರು ನರೇಂದ್ರ ಮೋದಿಯವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ಸುರೇಶ್ ಗೋಪಿ ಪ್ರಧಾನಿಗೆ ಚಿನ್ನದ ತಟ್ಟೆಯನ್ನು ಉಡುಗೊರೆಯಾಗಿ ನೀಡಿದರು.

             ಭಾಗ್ಯ ಮತ್ತು ಶ್ರೇಯಸ್ ಮದುವೆ ತಾರಾಬಲದಿಂದ ಕೂಡಿತ್ತು. ಮಮ್ಮುಟ್ಟಿ, ಮೋಹನ್ ಲಾಲ್ ಸೇರಿದಂತೆ ತಾರೆಗಳ ದಂಡು ವಿವಾಹ ಮಂಟಪದ ಮುಂಭಾಗದಲ್ಲಿ ಮದುವೆಗೆ  ಸಾಕ್ಷಿಯಾದರು.

             ಮೋಹನ್ ಲಾಲ್, ಮಮ್ಮುಟ್ಟಿ, ದಿಲೀಪ್, ಜಯರಾಮ್, ಖುಷ್ಬು, ರಚನಾ ನಾರಾಯಣನ್ ಕುಟ್ಟಿ, ಬಿಜು ಮೆನನ್, ಕಾವ್ಯಾ ಮಾಧವನ್, ಪಾರ್ವತಿ, ಸರಯೂ, ನಿರ್ದೇಶಕರಾದ ಹರಿಹರನ್, ಶಾಜಿ ಕೈಲಾಸ್, ನಿರ್ಮಾಪಕ ಸುರೇಶ್ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಧಾನಿ ಕೂಡ ನೆರೆದವರಿಗೆ ನಮಿಸಿದರಸಿದಕ್ಕೂ ಮೊದಲು ಪ್ರಧಾನಿ ಶ್ರೀಗುರುಯೂರಪ್ಪನ ದರ್ಶನ ಪಡೆದರು.


           ಇದೇ ವೇಳೆ ಭಾಗ್ಯ-ಶ್ರೇಯಸ್ ವಿವಾಹಿತರಾದ ದೇವಾಲಯದ ವಿವಾಹ ಮಂಟಪದ ಅಕ್ಕಪಕ್ಕದಲ್ಲಿ ಬುಧವಾರ ವಿವಾಹಿತರಾದ ಇತರ 10 ವಧು-ವರರನ್ನು ಅಭಿನಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries