ಕಾಸರಗೋಡು: : ಕೊಲ್ಲಂನಲ್ಲಿ ಗುರುವಾರ ಆರಂಭಗೊಂಡ 62ನೇ ರಾಜ್ಯಮಟ್ಟದ ಶಾಲಾ ಕಲೋತ್ಸವ ಈ ವರ್ಷ ಮಹತ್ತರ ಮೈಲುಗಲ್ಲೊಂದನ್ನು ದಾಖಲಿಸಿದ್ದು, ಅದು ಕಾಸರಗೋಡಿಗೆ ಅತ್ಯಂತ ಹೆಮ್ಮೆ ಎನಿಸಿದೆ.
ಕಾಸರಗೋಡಿನ ಮಾವಿಲ ಸಮುದಾಯದ ಅತ್ಯಂತ ಪ್ರಾಚೀನ ಕಲಾಪ್ರಕಾರವಾದ, ಮನಮೋಹಕ ‘ಮಂಗಳಂಕಳಿ’(ಮದುವೆ ನೃತ್ಯ)ಯನ್ನು ಪ್ರದರ್ಶನ ರೂಪದಲ್ಲಿ ಉದ್ಘಾಟನಾ ಪ್ರಧಾನ ವೇದಿಕೆಯಲ್ಲಿ ಮೊದಲ ಹಂತದಲ್ಲಿ ಇದೇ ಪ್ರಪ್ರಥಮ ಬಾರಿಗೆ ಕಾಸರಗೋಡು ಎಸ್.ಟಿ.ಮಾದರಿಯ ರೆಸಿಡೆನ್ಶಿಯಲ್ ಶಾಲೆ(ಜಿಎಂಆರ್ ಎಚ್‍ಎಸ್‍ಎಸ್ ಬಾಲಕಿಯರ ಶಾಲೆ) ಯ ವಿದ್ಯಾರ್ಥಿನಿ ಅಂಜನಾ ನೇತೃತ್ವದಲ್ಲಿ 15 ವಿದ್ಯಾರ್ಥಿಗಳ ತಂಡ ಪ್ರದರ್ಶಿಸಿದೆ.
ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ನೃತ್ಯವಾದ ಮಂಗಳಂ ಕಳಿಯನ್ನು ಈ ವರ್ಷದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಶಾಲೆಯ ಪ್ಲಸ್-ಟು ವಿದ್ಯಾರ್ಥಿನಿ ಅಚಿಜನಾ ಮತ್ತು ಜಿಲ್ಲೆಯ ಬುಡಕಟ್ಟು ಸಮುದಾಯದ 14 ಸಹಪಾಠಿಗಳು ಕಾಸರಗೋಡಿನ ಅದ್ಭುತ ಕಲಾಪ್ರಕಾರವನ್ನು ಪ್ರದರ್ಶಿಸಿದ ಕ್ಷಣವಾಗಿ ಇತಿಹಾಸದಲ್ಲಿ ದಾಖಲಾಗಿದ್ದು, ಮುಂದಿನ ವರ್ಷದಿಂದ ಮಂಗಳಂ ಕಳಿ ಸ್ಪರ್ಧೆಯಲ್ಲಿ ಸೇರ್ಪಡೆಗೊಳ್ಳಲಿದೆ ಎಂಬುದೂ ಮಹತ್ತರ.
“ನಮ್ಮ ತಂಡದ ಪ್ರದರ್ಶನಕ್ಕೆ ಕಾಸರಗೋಡಿನಿಂದ ಕೊಲ್ಲಂಗೆ ಪ್ರಯಾ, ಪ್ರದರ್ಶನಣ ಎಲ್ಲವೂ ಅದ್ಭುತ ಅನುಭವಗಳಾಗಿವೆ. ಈ ಕಳೆದ ಕೆಲವು ವಾರಗಳು ನಮ್ಮ ಜೀವನದಲ್ಲಿ ಅತ್ಯುತ್ತಮವಾದವು,'' ಎಂದು ಉತ್ಸಾಹಭರಿತ ಅಂಜನಾ ತಿಳಿಸಿರುವರು.
ಬುಡಕಟ್ಟು ಜನಾಂಗದ ಕಲಾ ಪ್ರಕಾರಗಳನ್ನು ಅನುಮೋದಿಸುವ ಮತ್ತು ಬೆಂಬಲಿಸುವ ಪ್ರಯತ್ನಗಳ ಭಾಗವಾಗಿ ಉತ್ಸವದಲ್ಲಿ ಮಂಗಳಂ ಕಲಿ ಪ್ರದರ್ಶಿಸಲಾಯಿತು. ಗಿರಿಜನ ಕಲ್ಯಾಣ ಸಚಿವ ಕೆ ರಾಧಾಕೃಷ್ಣನ್ ಅವರು ಕಳೆದ ವರ್ಷ ಕಾಸರಗೋಡಿನಲ್ಲಿ ನಡೆದಿದ್ದ ರಾಜ್ಯ ಕಲೋತ್ಸವದಲ್ಲಿ ವಿದ್ಯಾರ್ಥಿಗಳ ಪ್ರದರ್ಶನವನ್ನು ವೀಕ್ಷಿಸಿದ್ದರು ಆ ವೇಳೆ ಕಲೋತ್ಸವಕ್ಕೆ ಖುದ್ದಾಗಿ ಆಹ್ವಾನಿಸಿದ್ದರು.
“ಸಚಿವರು ಎಷ್ಟು ಪ್ರಭಾವಿತರಾದರು ಎಂದರೆ ಅವರು ನಮ್ಮನ್ನು ಕಲೋಲ್ಸವದಲ್ಲಿ ಪ್ರದರ್ಶನ ನೀಡಲು ಆಹ್ವಾನಿಸಿದರು. ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಕಠಿಣ ಅಭ್ಯಾಸ ನಡೆಸಿದರು. ಇವರೆಲ್ಲರೂ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಮಂಗಳಂ ಕಳಿಯಲ್ಲಿ ಪಾರಂಗತರಾಗಿದ್ದಾರೆ. ಆದರೆ ಹೆಚ್ಚಿನ ಜನಸಂದಣಿಯ ಮುಂದೆ ಪ್ರದರ್ಶನ ನೀಡಲು ನಮಗೆ ಸ್ವಲ್ಪ ಕಠಿಣತೆ ಮತ್ತು ಶ್ರದ್ಧೆ ಬೇಕಾಯಿತು,’’ ಎಂದು ಜಿಎಂಆರ್ ಎಚ್‍ಎಸ್‍ಎಸ್‍ನ ಶಿಕ್ಷಕಿ ಧನಿಯಾ ಹೇಳಿದರು.
ಮಾವಿಲರು ಮತ್ತು ಮಲವೆಟ್ಟುವರ್ ಸಮುದಾಯದ ವಿವಾಹಗಳಲ್ಲಿ ಮಂಗಳಂ ಕಳಿಯನ್ನು ಕಲ್ಯಾಣಕಳಿ ಎಂದೂ ಕರೆಯಲಾಗುತ್ತದೆ.
ಈ ಕಲಾ ಪ್ರಕಾರಕ್ಕೆ ಸರ್ಕಾರ ಮತ್ತು ಸಾರ್ವಜನಿಕರ ಬೆಂಬಲ ಸಿಕ್ಕಿರುವುದು ನಮಗೆ ಖುಷಿ ತಂದಿದೆ ಎನ್ನುತ್ತಾರೆ ತರಬೇತುದಾರ ರಾಜೀವ್. ಮುಂದಿನ ವರ್ಷದ ಕಲೋತ್ಸವದಲ್ಲಿ ಬುಡಕಟ್ಟು ಕಲೆಯನ್ನು ವಿಶಿಷ್ಟ ಸ್ಪರ್ಧಾ ವಿಭಾಗವನ್ನಾಗಿ ಸೇರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
62ನೇ ಆವೃತ್ತಿಯ ರಾಜ್ಯ ಶಾಲಾ ಕಲಾ ಉತ್ಸವ ಗುರುವಾರ ಕೊಲ್ಲಂನಲ್ಲಿ ಆರಂಭವಾಗಿದೆ. ಕಾರ್ಯಕ್ರಮದ ಮುಖ್ಯ ಸ್ಥಳವಾದ ಆಶ್ರಮ ಮೈದಾನದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ಸವವನ್ನು ಉದ್ಘಾಟಿಸಿದರು. ಸಂಸ್ಕøತ ಮತ್ತು ಅರೇಬಿಕ್‍ನಲ್ಲಿ ಸ್ಪರ್ಧೆಗಳನ್ನು ಒಳಗೊಂಡಂತೆ ಒಟ್ಟು 239 ಸ್ಪರ್ಧಾ ಕಾರ್ಯಕ್ರಮಗಳು 24 ವೇದಿಕೆಗಳಲ್ಲಿ ನಡೆಯುತ್ತಿವೆ. ಜ.8 ರಂದು ಸಮಾರೋಪಗೊಳ್ಳುತ್ತಿದೆ.
ಅಭಿಮತ:
ಇಂತಹ ಬುಡಕಟ್ಟು ಸಮುದಾಯಗಳ ಅಪೂರ್ವ ಕಲಾಪ್ರಕಾರ ರಾಜ್ಯಮಟ್ಟದಲ್ಲಿ ಗಮನ ಸೆಳೆದಿರುವುದು ಸಂತಸ ತಂದಿದೆ. ಸಂಬಂಧಿಸಿದ ಇಲಾಖೆ ಇಂತಹ ಅಪೂರ್ವ ಕಲೆಗಳ ಬೆಳವಣಿಗೆಗೆ ಹೆಚ್ಚು ಉತ್ಸುಕವಾಗಿ ಕಾರ್ಯನಿರ್ವಹಿಸಿದಲ್ಲಿ ಪರಂಪರೆ, ಸಂಸ್ಕøತಿ ಬೆಳವಣಿಗೆಗೊಂಡು ಮುಂದಿನ ತಲೆಮಾರಿಗೆ ದಾಟಬಲ್ಲದು. ದಾಖಲೀಕರಣವೂ ಅಗತ್ಯ.
-ಅರುಣ್ ಕುಮಾರ್
ಪ್ರಾಂಶುಪಾಲರು. ಜಿಎಂಆರ್ ಎಚ್‍ಎಸ್‍ಎಸ್ ಬಾಲಕಿಯರ ಶಾಲೆ. ಕಾಸರಗೋಡು




.jpg)
.jpg)
