ಕಾಸರಗೋಡು: ಸಂಚರಿಸುತ್ತಿದ್ದ ರ್ಯಲಿನಿಂದ ಬಿದ್ದು ವಯನಾಡ್ ಮಞಮಲೆಯಿಲ್ ನಿವಸಿ ಐಶ್ವರ್ಯ ಜೋಸೆಫ್(30)ದಾರುಣವಾಗಿ ಮೃತಪಟ್ಟಿದ್ದಾರೆ. ಕೋಯಿಕ್ಕೋಡಿನ ಮಾರ್ಕೆಟಿಂಗ್ ಸಂಸ್ಥೆಯೊಂದರ ಹ್ಯುಮನ್ ರಿಸೋರ್ಸ್ ಪ್ರಬಂಧಕಿಯಾಗಿದ್ದರು.
ಕೋಯಿಕ್ಕೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ನೇತ್ರಾವತಿ ಎಕ್ಸ್‍ಪ್ರೆಸ್ ರೈಲಲ್ಲಿ ತೆರಳುತ್ತಿದ್ದ ಐಶ್ವರ್ಯ ಜೋಸೆಫ್ ಬೇಕಲ-ಕೋಟಿಕುಳಂ ನಡುವಿನ ಮಾಸ್ತಿಕುಂಡ್ ಎಂಬಲ್ಲಿ ರಐಲಿಂದ ಬಿದ್ದಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಿಲ್ಲ. ಮೃತದೇಹ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





