ನವದೆಹಲಿ: ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮ ಲಲ್ಲಾ ವಿಗ್ರಹವು ಹೃದಯ ಸ್ಪರ್ಶಿಯಾಗಿದೆ ಹಾಗೂ ಇದು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಶ್ಲಾಘಿಸಿದ್ದಾರೆ.
0
samarasasudhi
ಜನವರಿ 29, 2024
ನವದೆಹಲಿ: ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮ ಲಲ್ಲಾ ವಿಗ್ರಹವು ಹೃದಯ ಸ್ಪರ್ಶಿಯಾಗಿದೆ ಹಾಗೂ ಇದು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಶ್ಲಾಘಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ನಮಸ್ಕಾರ ಅರುಣ್ ಯೋಗಿರಾಜ್.
ಪಟ್ನಾಯಕ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಯೋಗಿರಾಜ್, 'ನಿಮ್ಮ ಪ್ರಶಂಸೆ ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸುತ್ತದೆ' ಎಂದಿದ್ದಾರೆ.
'ಪ್ರಪಂಚದ ಹೆಸರಾಂತ ಮರಳು ಕಲಾವಿದರಿಂದ ಮೆಚ್ಚುಗೆ ಪಡೆದಿರುವುದು ನನ್ನ ಅದೃಷ್ಟ. ಖಂಡಿತವಾಗಿಯೂ ಇದು ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ನನ್ನನ್ನು ಪ್ರೇರೇಪಿಸುತ್ತದೆ' ಎಂದು ಯೋಗಿರಾಜ್ ಹೇಳಿದ್ದಾರೆ.