HEALTH TIPS

ಗೂಗಲ್​ ಮ್ಯಾಪ್​ ಅವಾಂತರ: ರಸ್ತೆ ಬಿಟ್ಟು ಮಟ್ಟಿಲುಗಳ ಮಧ್ಯೆ ಸಿಲುಕಿದ ಕಾರು, ಚಾಲಕನ ಪರದಾಟ

             ಚೆನ್ನೈ: ಯಾವುದಾದರೂ ಸ್ಥಳಕ್ಕೆ ಹೋಗಬೇಕಾದಾಗ, ಯಾವುದಾದರೂ ಸ್ಥಳವನ್ನು ನೋಡಿ ತಿಳಿಯಬೇಕಾದಾಗ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದು ಸಲ ಗೂಗಲ್ ಮ್ಯಾಪ್​, ಗೂಗಲ್​ ಸರ್ಚ್​ನ ಮೊರೆ ಹೋಗಿರುತ್ತೇವೆ. ಅದರಲ್ಲೂ ಗೂಗಲ್​ ಮ್ಯಾಪ್ ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ, ಗೂಗಲ್​ ಮ್ಯಾಪ್​ ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಏನಾಗಬಹುದು ಎಂಬುದಕ್ಕೆ ತಮಿಳುನಾಡಿನಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ.

              ಗೂಗಲ್​ ಮ್ಯಾಪ್​ ಸೂಚಿಸಿದ ವೇಗದ ಮಾರ್ಗವನ್ನು ಅನುಸರಿಸಲು ಹೋಗಿ ಎಸ್​ಯುವಿ ಕಾರೊಂದು ರಸ್ತೆಯನ್ನು ಬಿಟ್ಟು ಮೆಟ್ಟಿಲುಗಳ ನಡುವೆ ಸಿಲುಕಿದ ಪರದಾಡಿದ ಪ್ರಸಂಗ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರು ತಾಲೂಕಿನಲ್ಲಿ ನಡೆದಿದೆ.

                 ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ವಾರಾಂತ್ಯವನ್ನ ಮುಗಿಸಿ, ಗುಡಲೂರಿನಿಂದ ಕರ್ನಾಟಕಕ್ಕೆ ವಾಪಸಾಗುತ್ತಿದ್ದಾಗ ಇದು ಘಟಿಸಿದೆ. ಈ ಗುಡಲೂರು, ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಟ್ರೈ-ಜಂಕ್ಷನ್‌ನಲ್ಲಿ ನೆಲೆಗೊಂಡಿದ್ದು, ಆಗಾಗ ಊಟಿಗೆ ಹೋಗುವ ಪ್ರವಾಸಿಗರಲ್ಲಿ ಹೆಚ್ಚಿನ ಮಂದಿ ಇಷ್ಟಪಡುವ ವಿಹಾರ ತಾಣವಾಗಿದೆ. ಗುಡಲೂರಿನಿಂದ ಕರ್ನಾಟಕಕ್ಕೆ ಹೊರಟ ವ್ಯಕ್ತಿಯೊಬ್ಬ ತನ್ನ ಸ್ನೇಹಿತರ ನಿರ್ದೇಶನದಂತೆ ವೇಗದ ಮಾರ್ಗಕ್ಕಾಗಿ ಗೂಗಲ್​ ಮ್ಯಾಪ್ ಅನುಸರಿಸಿದ್ದಾರೆ. ​

ಆದರೆ, ಮ್ಯಾಪ್​ ಸೂಚಿಸಿದ ಮಾರ್ಗವು ವಸತಿ ಪ್ರದೇಶದಲ್ಲಿ ಮೆಟ್ಟಿಲುಗಳ ಕಡಿದಾದ ಇಳಿಜಾರಿನಲ್ಲಿ ಸಿಲುಕುವಂತೆ ಮಾಡಿತು. ಇದರಿಂದ ಆತಂಕಕ್ಕೆ ಒಳಗಾದ ವ್ಯಕ್ತಿ, ಕಾರನ್ನು ಮೆಟ್ಟಿಲುಗಳ ಮೇಲೆ ನಿಲ್ಲಿಸಿ ಸಹಾಯಕ್ಕಾಗಿ ಕೈ ಚಾಚಿದನು. ಸ್ಥಳೀಯ ನಿವಾಸಿಗಳು ಮತ್ತು ಪೋಲೀಸ್ ಸಿಬ್ಬಂದಿ ತಕ್ಷಣವೇ ಮಧ್ಯಪ್ರವೇಶಿಸಿ, ಎಸ್‌ಯುವಿಯನ್ನು ಮುಖ್ಯ ರಸ್ತೆಗೆ ಹಿಂತಿರುಗಿಸಲು ಸಹಾಯ ಮಾಡಿದರು. ಬಳಿಕ ಕಾರಿನಲ್ಲಿದ್ದ ವ್ಯಕ್ತಿ ಕರ್ನಾಟಕಕ್ಕೆ ತಮ್ಮ ಪ್ರಯಾಣವನ್ನು ಪುನರಾರಂಭಿಸಿದರು.

                ಅಂದಹಾಗೆ ಗೂಗಲ್​ ಮ್ಯಾಪ್​, ನೈಜ ಸಮಯದ ಟ್ರಾಫಿಕ್ ಡೇಟಾ ಮತ್ತು ಇತರ ಅಂಶಗಳ ಆಧಾರದ ಮೇಲೆ ವೇಗವಾದ ಮಾರ್ಗವನ್ನು ಲೆಕ್ಕಾಚಾರ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದು ಎರಡು ಬಿಂದುಗಳ ನಡುವಿನ ಕಡಿಮೆ ಅಂತರವನ್ನು ನಿರ್ಧರಿಸಲು Dijkstra ಮತ್ತು A ನಂತಹ ಅತ್ಯಾಧುನಿಕ ಅಲ್ಗಾರಿದಮ್‌ಗಳನ್ನು ಬಳಸುತ್ತದೆ. ಆದರೆ, ಕೆಲವೊಮ್ಮೆ ಎಡವಟ್ಟುಗಳಿಂದ ಇಂತಹ ಅಚಾತುರ್ಯ ಸಂಭವಿಸಿಬಿಡುತ್ತವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries