ಕಾಸರಗೋಡು: ದ್ವಿಚಕ್ರ ವಾಹನದಲ್ಲಿ ಹೊಟೇಲ್ ತ್ಯಾಜ್ಯಗಳನ್ನು ಎಸೆಯಲು ತಲುಪಿದವರನ್ನು ಸ್ಥಳೀಯರು ಹಿಡಿದು ಪೋಲೀಸರಿಗೆ ಹಸ್ತಾಂತರಿಸಿದ ಘಟನೆ ಕಾಂಞಂಗಾಡ್ ಐಎಂಎ ಹಾಲ್ ಸಮೀಪ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಕಾಂಞಂಗಾಡ್‍ನಲ್ಲಿ ಶವರ್ಮ ಮಾರಾಟ ಮಾಡುತ್ತಿರುವ ಪಾರಪಳ್ಳಿ ಕಾಟಿಪ್ಪಾರದ ಎಂ.ಇಬ್ರಾಹಿಂ, ಪಾಣತ್ತೂರು ಚಾಮುಂಡಿಕುನ್ನಿನ ಕೆ.ಎಂ.ಸತ್ತಾರ್ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ.

