HEALTH TIPS

ಇಚ್ಲಂಗೋಡು ಪಚ್ಚಂಬಳ ಮಖಾಂ ಉರುಸ್ ಇಂದಿನಿಂದ 18 ರವರೆಗೆ

                   ಕುಂಬಳೆ: ಇಚ್ಲಂಗೋಡು ಪಚ್ಚಂಬಳ ಹಜರತ್ ಬಾವ ಫಕೀರ್ ವಲಿಯುಲ್ಲಾಹಿ ಹಲಮಿ ಮಖಾಂ ಉರೂಸ್ ಇಂದಿನಿಂದ(ಫೆ.4ರಿಂದ) 18ರವರೆಗೆ ವಿಸ್ತೃತ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಬಂಧಪಟ್ಟವರು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

            6 ನೇ ಶತಮಾನದಲ್ಲಿ ಮಕ್ಕಾದಿಂದ ಬಂದ ಹಜರತ್ ಮಾಲಿಕ್ ದಿನಾರ್ ಅವರ ಉತ್ತರಾಧಿಕಾರಿಯಾಗಿ ಯೆಮೆನ್‍ನ ಹಲ್ರ್ ಮಾವ್ಟ್ ನಿಂದ ಆಗಮಿಸಿದ್ದ ಬಾವಾ ಫಕೀರ್ ಅವರ ನೆನಪಿಗಾಗಿ ಎರಡು ವರ್ಷಗಳಿಗೊಮ್ಮೆ ಉರೋಸ್ ಆಯೋಜಿಸಲಾಗುತ್ತಿದೆ. ಇಂದಿನ ಮೊದಲ ದಿನ ಸೈಯದ್ ಕೆ.ಎಸ್. ಅಟ್ಟಕೋಯ ತಂಙಳ್ ಮಖಾಂ ಝಿಯಾರತ್ ನೇತೃತ್ವ ವಹಿಸಲಿದ್ದಾರೆ. ನಂತರ ಇಚ್ಲಂಗೋಡು ಮಾಲಿಕ್ ದಿನಾರ್ ಜುಮಾ ಮಸೀದಿ ಅಧ್ಯಕ್ಷ ಅನ್ಸಾರ್ ಶೇರೂಲ್ ಧ್ವಜಾರೋಹಣ ನೆರವೇರಿಸುವರು. ರಾತ್ರಿ ಕೆ.ಎಸ್.ಅಟ್ಟಕೋಯ ತಂಙಳ್ ಉರೂಸ್ ಕಾರ್ಯಕ್ರಮ ಉದ್ಘಾಟಿಸುವರು. ಮಜೀದ್ ಬಾಖವಿ ಅಧ್ಯಕ್ಷತೆ ವಹಿಸುವರು. ಸಕರಿಯ ಸಖಾಫಿ ತೇನಾಳ ಮುಖ್ಯ ಭಾಷಣ ಮಾಡುವರು. ಮುಹಿಯುದ್ದೀನ್ ಸಅದಿ, ಇರ್ಶಾದ್ ಫೈಝಿ, ಅನ್ಸಾರ್ ಶೆರೂಲ್, ನ್ಯಾಯವಾದಿ ಅನಸ್ ಮತ್ತು ಅಬ್ದುಲ್ಲಾ ಸಖಾಫಿ ಮಾತನಾಡುವರು. ನಂತರದ ದಿನಗಳಲ್ಲಿ ನೌಶಾದ್ ಬಾಖವಿ ಚಿರೈನ್‍ಕೀಝ್, ಮುಳ್ಳೂರುಕರ ಮುಹಮ್ಮದಲಿ ಸಖಾಫಿ, ಇ.ಪಿ.ಅಬೂಬಕರ್ ಅಲ್ ಖಾಸಿಮಿ ಪತ್ತನಾಪುರ ಉಪನ್ಯಾಸ ನೀಡಲಿದ್ದಾರೆ. 8 ರಂದು ಮಧ್ಯಾಹ್ನ 3 ಕ್ಕೆ ಅಬ್ದುಲ್ ರಹಿಮಾನ್ ಶಹೀರ್ ಅಲ್ ಬುಖಾರಿ ಮಲ್ಹರ್ ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸಲಿದ್ದಾರೆ.ರಾತ್ರಿ ಮಶ್ಹೂದ್ ಸಖಾಫಿ ಉಪನ್ಯಾಸ ನೀಡಲಿದ್ದಾರೆ. 9ರಂದು ರಾತ್ರಿ ಹನೀಫ್ ನಿಝಾಮಿ ಮೊಗ್ರಾಲ್ ಹಾಗೂ ಮುಂದಿನ ದಿನಗಳಲ್ಲಿ ಅಬ್ದುಲ್ ರಹಿಮಾನ್ ಸಖಾಫಿ ಉಪನ್ಯಾಸ ನೀಡಲಿದ್ದು, 11ರಂದು ರಾತ್ರಿ ನೂರ್ ಅಜ್ಮೀರ್ ಮಜ್ಲಿಸ್ ವಲಿಯುದ್ದೀನ್ ಫೈಝಿ ವಾಜಕಾಡ್, 12ರಂದು ಅಬ್ದುಲ್ ಲತೀಫ್ ಸಖಾಫಿ ಮದನಿಯಂ ಉಪನ್ಯಾಸ ನೀಡಲಿದ್ದಾರೆ. 13ರಂದು ರಾತ್ರಿ ಆಶಿಕ್ ದಾರಿಮಿ ಆಲಪ್ಪುಳ ಹಾಗೂ 14ರಂದು ಡಾ.ಮುಹಮ್ಮದ್ ಫಾರೂಕ್ ನಈಮಿ ಉಪನ್ಯಾಸ ನೀಡಲಿದ್ದಾರೆ. 15 ರಂದು ಮಧ್ಯಾಹ್ನ 3 ಕ್ಕೆ ಸೈಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಕುನ್ನಂಗೈ ನೇತೃತ್ವ ವಹಿಸಲಿದ್ದಾರೆ. ರಾತ್ರಿ 8.30ಕ್ಕೆ ಕುಮ್ಮನಂ ನಿಜಾಮುದ್ದೀನ್ ಅಝ್ಹರಿ ಹಾಗೂ 16ಕ್ಕೆ ನೌಫಲ್ ಸಖಾಫಿ ಕಳಸ ಉಪನ್ಯಾಸ ನೀಡಲಿದ್ದಾರೆ. 17 ರಂದು ಜಂಟಿ ಜಮಾತ್ ಖಾಝಿ ಪ್ರೆಕ್ ನ ಸಮಾರೋಪ ನಡೆಯಲಿದೆ. ಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟಿಸುವರು. ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ ಅಧ್ಯಕ್ಷತೆ ವಹಿಸುವರು. ಸಿರಾಜುದ್ದೀನ್ ಖಾಸಿಮಿ ಪತ್ತನಾಪುರ ಉಪನ್ಯಾಸ ನೀಡಲಿದ್ದಾರೆ.

        18ರಂದು ಬೆಳಗ್ಗೆ 9 ಕ್ಕೆ ಕೆ.ಎಸ್.ಅಲಿ ತಂಙಳ್ ಕುಂಬೋಳ್ ಉದ್ಘಾಟಿಸುವರು. ಬಳಿಕ  ಅನ್ನಸಂತರ್ಪಣೆಯೊಂದಿಗೆ ಉರೂಸ್ ಮುಕ್ತಾಯವಾಗಲಿದೆ.

             ಸುದ್ದಿಗೋಷ್ಠಿಯಲ್ಲಿ ಖತೀಬ್ ಇμರ್Áದ್ ಫೈಝಿ ಬೆಳ್ಳಾರೆ, ಜಮಾ ಅತ್ ಜ.ಕಾರ್ಯದರ್ಶಿ ಮಹ್ಮದ್ ಕುಟ್ಟಿ ಹಾಜಿ, ಉಪಾಧ್ಯಕ್ಷ ಮೊಯ್ತಿ ಹಾಜಿ ಕತಾರ್, ಕೋಶಾಧಿಕಾರಿ ಫಾರೂಕ್ ಪಚ್ಚಂಬಳ, ಉರೂಸ್ ಸಮಿತಿ ಸಹ ಸಂಚಾಲಕ ಮೊಯ್ತೀನ್ ಕುಂಜಹಮ್ಮದ್ ಹಾಜಿ, ಪ್ರಚಾರ ಸಮಿತಿ ಸಂಚಾಲಕ ಹಸನ್ ಇಚ್ಲಂಗೋಡ್ ಉಪಸ್ಥಿತರಿದ್ದು ಮಾಹಿತಿ ನೀಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries