ನವದೆಹಲಿ: 'ಚುನಾವಣಾ ಪ್ರಚಾರ ಕಾರ್ಯದಲ್ಲಿ ಯಾವುದೇ ರೀತಿಯಲ್ಲಿ ಮಕ್ಕಳನ್ನು ಬಳಸಿಕೊಳ್ಳಬಾರದು' ಎಂದು ಭಾರತೀಯ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಸೋಮವಾರ ಸೂಚನೆ ನೀಡಿದೆ.
0
samarasasudhi
ಫೆಬ್ರವರಿ 06, 2024
ನವದೆಹಲಿ: 'ಚುನಾವಣಾ ಪ್ರಚಾರ ಕಾರ್ಯದಲ್ಲಿ ಯಾವುದೇ ರೀತಿಯಲ್ಲಿ ಮಕ್ಕಳನ್ನು ಬಳಸಿಕೊಳ್ಳಬಾರದು' ಎಂದು ಭಾರತೀಯ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಸೋಮವಾರ ಸೂಚನೆ ನೀಡಿದೆ.
ಲೋಕಸಭಾ ಚುನಾವಣೆ ಸನಿಹವಾಗುತ್ತಿರುವಂತೆ ಈ ಸಲಹೆ ನೀಡಿರುವ ಆಯೋಗವು, 'ಪೋಸ್ಟರ್‌ಗಳು ಮತ್ತು ಕರಪತ್ರಗಳ ವಿತರಣೆ ಹಾಗೂ ಘೋಷಣೆ ಕೂಗುವುದು, ವಾಹನದಲ್ಲಿ ಅಥವಾ ರ್‍ಯಾಲಿಗಳಲ್ಲಿ ಕರೆದೊಯ್ಯುವುದು ಸೇರಿದಂತೆ ಇತರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಳ್ಳಬಾರದು' ಎಂದು ನಿರ್ದೇಶನ ನೀಡಿದೆ.
'ಒಂದು ವೇಳೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷ, ಯಾವುದೇ ರೂಪದಲ್ಲಾದರೂ ಮಕ್ಕಳನ್ನು ಬಳಸಿಕೊಂಡರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಆಯೋಗ ಹೇಳಿದೆ.
'ಚುನಾವಣೆಗೆ ಸಂಬಂಧಿಸಿದ ಯಾವುದೇ ಕೆಲಸದಿಂದ ಯಾವುದೇ ವಯಸ್ಸಿನ ಮಕ್ಕಳನ್ನು ದೂರ ಇಡಬೇಕು' ಎಂದು ಆಯೋಗವು ಪ್ರತ್ಯೇಕವಾಗಿ ಎಲ್ಲ ಚುನಾವಣಾ ಅಧಿಕಾರಿಗಳಿಗೆ ಆಯೋಗ ನಿರ್ದೇಶನ ನೀಡಿದೆ.