ಎರ್ನಾಕುಳಂ: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ, ಶಾಸಕ ಕೆ.ಬಾಬು ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಪಿಎಂಎಲ್‍ಎ ಕಾಯ್ದೆಯಡಿ 25.82 ಲಕ್ಷ ಮೌಲ್ಯದ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಇಡಿ ಕ್ರಮವಾಗಿದೆ. 2007ರಿಂದ 2016ರವರೆಗಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ್ದು.
ಉಮ್ಮನ್ ಚಾಂಡಿ ಸಂಪುಟದಲ್ಲಿ ಅಬಕಾರಿ ಮತ್ತು ಮೀನುಗಾರಿಕೆ ಸಚಿವರಾಗಿದ್ದ ಕೆ.ಬಾಬು ವಿರುದ್ಧ 150 ಕೋಟಿ ರೂ.ಗಳ ಆರ್ಥಿಕ ಅವ್ಯವಹಾರ ನಡೆಸಿರುವ ಬಗ್ಗೆ ವಿಜಿಲೆನ್ಸ್ ಪ್ರಕರಣ ದಾಖಲಿಸಿದೆ. ಬಳಿಕ ಇಡಿ ಕೂಡ ಘಟನೆಯ ತನಿಖೆ ಆರಂಭಿಸಿತ್ತು. ಆದರೆ, ವಿಜಿಲೆನ್ಸ್ ತನಿಖೆಯಲ್ಲಿ 25 ಲಕ್ಷ ರೂ.ಗಳ ಆರ್ಥಿಕ ವಂಚನೆ ಮಾತ್ರ ವರದಿಯಾಗಿದೆ.





