ಕಾಸರಗೋಡು: ಪ್ರತಿಯೊಬ್ಬ ಕನ್ನಡಿಗ ಕನ್ನಡದ ಕೈಂಕರ್ಯದಲ್ಲಿ ಸಕ್ರಿಯವಾಘಿ ಪಾಲ್ಗೊಂಡಾಗ ಗಡಿನಾಡಿನಲ್ಲಿ ಕನ್ನಡದ ಚಟುವಟಿಕೆ ಮತ್ತಷ್ಟು ವೇಗಪಡೆದುಕೊಳ್ಳಲು ಸಾಧ್ಯ ಎಂದು ಕೇಂದ್ರ ಕನ್ನಡ ಸಾಹಿತ್ಯಪರಿಷತ್ ಮಾರ್ಗದಶ್ಕ ಸಮಿತಿ ಸದಸ್ಯ ಡಾ. ಮುರಲೀ ಮೋಹನ್ ಚೂಂತಾರು ತಿಳಿಸಿದ್ದಾರೆ.
ಅವರು ಕಾಸರಗೋಡು ತಾಳಿಪಡ್ಪಿನಲ್ಲಿರುವ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಡೆದ'ಕನ್ನಡ ಮೈತ್ರಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕನ್ನಡದ ಮನಸ್ಸುಗಳು ಒಟ್ಟುಗುಡಿದಾಗ ಕನ್ನಡದ ತೇರು ಸಲೀಸಾಗಿ ಮುಂದೆ ಸಆಗಲು ಸಾಧ್ಯ. ಕಸಾಪ ಗಡಿನಾಡ ಘಟಕದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಳಗೊಳಿಸುವುದರ ಜತೆಗೆ ಹೆಚ್ಚಿನ ಕನ್ನಡದ ಚಟುವಟಿಕೆ ನಡೆಯುವಂತಾಗಬೇಕು ಎಂದು ತಿಳಿಸಿದರು.
ಹಿರಿಯ ವೈದ್ಯ ಸಾಹಿತಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಗೌರವಾಧ್ಯಕ್ಷ ಡಾ. ರಮಾನಂದ ಬನಾರಿ ಅದ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹಿರಿಯ ವಕೀಲ, ಕಸಾಪ ಕಾಸರಗೋಡು ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಐ.ವಿ ಭಟ್ ಅವರ ಅಬಿನಂದನಾ ಗ್ರಂಥ'ಸ್ಥಿತ ಪ್ರಜ್ಞ'ದ ಅವಲೋಕನ ನಡೆಯಿತು. ಪತ್ರಕರ್ತ ಎಂ.ನಾ ಚಂಬಲ್ತಿಮಾರ್ ಪುಸ್ತಕದ ಅವಲೋಕನ ನಡೆಸಿದರು. ಈ ಸಂದರ್ಭ ಐ.ವಿ ಭಟ್ ದಂಪತಿಯನ್ನು ಅಭಿನಂದಿಸಲಾಯಿತು. ವಕೀಲ ಥಾಮಸ್ ಡಿ.ಸೋಜ ಸನ್ಮಾನ ಪತ್ರ ವಾಚಿಸಿದರು. ಭತತದ ಕೃಷಿಯಲ್ಲಿ ನಡೆಸಿದ ಸಾಧನೆಗಾಗಿ ಪದ್ಮಶ್ರೀ ಪುರಸ್ಕøತರಾದ ಸತ್ಯನಾರಾಯಣ ಬೆಳೇರಿ ಅವರಿಗೆ ಸನ್ಮಾನ ಸಮಾರಂಭ ನಡೆಯಿತು. ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಸತ್ಯನಾರಾಯಣ ಬೆಳೇರಿ ಅವರ ಸಾಧನೆಗಳ ಬಗ್ಗೆ ಪರಿಚಯ ನೀಡಿದರು. ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಎನ್. ಕೆ ಮೋಹನ ದಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು
ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಮಾರ್ಗದರ್ಶಕರ, ಯುವ ಕಾರ್ಯಕರ್ತರ, ಕನ್ನಡ ಪರ ಸಂಘಟನೆಗಳ ಸಾರಥಿಗಳ ಮತ್ತು ಕನ್ನಡ ಮಾಧ್ಯಮ ಪತ್ರಕರ್ತರನ್ನೊಳಗೊಂಡ ಸ್ನೇಹಕೂಟ ಕಾರ್ಯಕ್ರಮ ನಡೆಯಿತು. ಕಿಶೋರ್ ಪೆರ್ಲ ಪ್ರಾರ್ಥನೆ ಹಾಡಿದರು. ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಶೇಖರ ಶೆಟ್ಟಿ ಬಾಯಾರು ವಂದಿಸಿದರು.


