HEALTH TIPS

ನೈಜೀರಿಯಾದಲ್ಲಿ 100 ಜನರ ಅಪಹರಣ

            ಬುಜಾ: ನೈಜೀರಿಯಾದ ವಾಯವ್ಯ ಭಾಗದಲ್ಲಿನ ಎರಡು ಹಳ್ಳಿಗಳಿಗೆ ನುಗ್ಗಿದ ಶಸ್ತ್ರಸಜ್ಜಿತ ತಂಡವು ಕನಿಷ್ಠ ನೂರು ಜನರನ್ನು ಸಾಮೂಹಿಕವಾಗಿ ಅಪಹರಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

              ಕಡುನಾ ರಾಜ್ಯದ ಕಾಜೂರು ಕೌನ್ಸಿಲ್ ಪ್ರದೇಶದಲ್ಲಿ ಬಂದೂಕುಧಾರಿಗಳು ಶನಿವಾರ, ಭಾನುವಾರ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಶಾಸನಸಭೆಯಲ್ಲಿ ಕಾಜೂರು ಪ್ರತಿನಿಧಿಸುವ ಉಸ್ಮಾನ್ ಡಲ್ಲಾಮಿ ಸ್ಟಿಂಗೊ ಹೇಳಿದ್ದಾರೆ.

'            ಶನಿವಾರ ನಸುಕಿನಲ್ಲಿ ಡೊಗೊನ್‌ ನೋಮಾ ಸಮುದಾಯದವರ ಮೇಲೆ ದಾಳಿ ನಡೆಸಿದ ಅಪಹರಣಕಾರರು 14 ಮಂದಿ ಮಹಿಳೆಯರನ್ನು ಅಪಹರಿಸಿದರು. ಭಾನುವಾರ ರಾತ್ರಿ ಕಾಜೂರು-ಸ್ಟೇಷನ್ ಸಮುದಾಯವರ ಮೇಲೆ ದಾಳಿ ನಡೆಸಿ 87 ಜನರನ್ನು ವಶಕ್ಕೆ ಪಡೆದಿದ್ದಾರೆ' ಎಂದು ತಿಳಿಸಿದ್ದಾರೆ.

               'ಈ ಪ್ರದೇಶದಲ್ಲಿನ ದೂರದ ಹಳ್ಳಿಗಳಲ್ಲಿ ಇಂದಿಗೂ ಭದ್ರತೆಯಿಲ್ಲ. ಭದ್ರತಾ ಪಡೆಗಳು ಹತ್ತಿರದಲ್ಲಿ ಕಾರ್ಯಾಚರಣೆ ನಡೆಸುತ್ತಿಲ್ಲ' ಎಂದು ಅವರು ಕಳವಳ ವ್ಯಕ್ತಪಡಿಸಿದರು. 'ಇಲ್ಲಿಯ ತನಕ ನಮಗೆ ಯಾವುದೇ ಭದ್ರತೆಯೂ ಇಲ್ಲವಾಗಿದೆ' ಎಂದು ಈಚೆಗಷ್ಟೇ ಅಪಹರಣಕ್ಕೊಳಗಾದವರ ಸಂಬಂಧಿಕರಾದ ಮಡಕಿ ಟಾಂಕೊ ಅರಿಡು ಹೇಳಿದರು.

            ಎರಡು ವಾರಗಳ ಹಿಂದಷ್ಟೇ ಕಡುನಾ ರಾಜ್ಯದಲ್ಲಿ ಸುಮಾರು 300 ಶಾಲಾ ಮಕ್ಕಳನ್ನು ಅಪಹರಿಸಲಾಗಿತ್ತು. ಇವರನ್ನು ಕಾಡುಗಳಲ್ಲಿ ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries