ಲಖನೌ: ಹೋಳಿ ಆಚರಣೆ ವೇಳೆ ಮುಸ್ಲಿಂ ಸಮುದಾಯದ ಮೂವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಧಾಂಪುರದಲ್ಲಿ ಅಪ್ರಾಪ್ತ ವಯಸ್ಸಿನ ಮೂವರು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
0
samarasasudhi
ಮಾರ್ಚ್ 25, 2024
ಲಖನೌ: ಹೋಳಿ ಆಚರಣೆ ವೇಳೆ ಮುಸ್ಲಿಂ ಸಮುದಾಯದ ಮೂವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಧಾಂಪುರದಲ್ಲಿ ಅಪ್ರಾಪ್ತ ವಯಸ್ಸಿನ ಮೂವರು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಒಬ್ಬ ಪುರುಷ ಹಾಗೂ ಇಬ್ಬರು ಮಹಿಳೆಯರು ಬೈಕ್‌ವೊಂದರಲ್ಲಿ ಹೋಗುತ್ತಿದ್ದರು.
ಮಹಿಳೆಯು ವಿರೋಧ ವ್ಯಕ್ತಪಡಿಸಿ ಬಣ್ಣ, ನೀರು ಹಾಕದಂತೆ ಹೇಳಿದರೂ ಯುವಕರು ಕೇಳುವುದಿಲ್ಲ. ಒಬ್ಬ ಯುವಕ ದಾರಿಹೋಕರಿಗೂ ಬಣ್ಣ ಎರಚುವುದು ಸಂಪ್ರದಾಯ ಎಂದಿದ್ದಾನೆ. ಕೆಲವರು ಧಾರ್ಮಿಕ ಘೋಷಣೆಗಳನ್ನೂ ಕೂಗಿದ್ದಾರೆ. ಈ ವಿಡಿಯೊ ಜಾಲತಾಣಗಳಲ್ಲಿ ಹಾರಿದಾಡಿದ ಬಳಿಕ ಪೊಲೀಸರು ಕಿರುಕುಳ ನೀಡಿದವರನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಹೋಳಿ ಆಚರಣೆ ನೆಪದಲ್ಲಿ ಇತರರಿಗೆ ಕಿರುಕುಳ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.