ನವದೆಹಲಿ: ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಜೆಪಿ ಇಂದು (ಶುಕ್ರವಾರ) ಬಿಡುಗಡೆ ಮಾಡಿದೆ.
ತಮಿಳು ನಟ ಶರತ್‌ಕುಮಾರ್ ಅವರ ಪತ್ನಿ ರಾಧಿಕಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಅವರು ವಿರುಧುನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಇತ್ತೀಚೆಗಷ್ಟೇ ಶರತ್‌ಕುಮಾರ್ ಅವರು ತಮ್ಮ ಆಲ್ ಇಂಡಿಯಾ ಸಮತ್ವ ಮಕ್ಕಳ್ ಕಚ್ಚಿ (ಎಐಎಸ್‌ಎಂಕೆ) ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.
ಅಭ್ಯರ್ಥಿಗಳ ಪಟ್ಟಿ ಇಂತಿದೆ...
ಪುದುಚೇರಿ - ಎ. ನಮಶಿವಾಯಂ
ತಿರುವಳ್ಳೂರ್ (ಎಸ್‌ಸಿ) - ಬಾಲಗಣಪತಿ
ಚೆನ್ನೈ ಉತ್ತರ - ಪಾಲ್ ಕನಕರಾಜ್
ತಿರುವಣ್ಣಾಮಲೈ - ಅಶ್ವಥಾಮನ್
ನಾಮಕ್ಕಲ್ - ಕೆ.ಪಿ.ರಾಮಲಿಂಗಂ
ತಿರುಪ್ಪೂರ್ - ಎಪಿ ಮುರುಗಾನಂದಂ
ಪೊಲ್ಲಾಚಿ - ವಸಂತರಾಜನ್
ಕರೂರ್ - ವಿವಿ ಸೆಂಥಿಲನಾಥನ್
ಚಿದಂಬರಂ (ಎಸ್‌ಸಿ) - ಕಾರ್ತಿಯಾಯಿನಿ
ನಾಗಪಟ್ಟಣಂ (ಎಸ್‌ಸಿ) - ಎಸ್‌ಜಿಎಂ ರಮೇಶ್
ತಂಜಾವೂರು - ಮುರುಗಾನಂದಂ
ಶಿವಗಂಗಾ - ದೇವನಾಥನ್ ಯಾದವ್
ವಿರುಧುನಗರ - ರಾಧಿಕಾ ಶರತ್‌ಕುಮಾರ್
ಮಧುರೈ - ರಾಮ ಶ್ರೀನಿವಾಸನ್
ತೆಂಕಶಿ - ಜಾನ್ ಪಾಂಡಿಯನ್
ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಲಾಗಿತ್ತು. ಮಾರ್ಚ್ 2 ಮತ್ತು 13ರಂದು ಬಿಡುಗಡೆಯಾದ ಎರಡು ಪಟ್ಟಿಗಳಲ್ಲಿ ಬಿಜೆಪಿ 267 ಅಭ್ಯರ್ಥಿಗಳನ್ನು ಘೋಷಿಸಿತ್ತು. 195 ಹೆಸರುಗಳನ್ನು ಒಳಗೊಂಡ ಮೊದಲ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ಕಿರಣ್ ರಿಜಿಜು ಮುಂತಾದ ಪ್ರಮುಖರ ಹೆಸರಿತ್ತು.


