HEALTH TIPS

ಭಾರತದಿಂದ ಭೂತಾನ್‌ಗೆ ₹ 500 ಕೋಟಿ ಬಿಡುಗಡೆ

             ಥಿಂಪು: ಗ್ಯಾಲ್‌ಸಂಗ್‌ ಯೋಜನೆಗೆ ಸಂಬಂಧಿಸಿದಂತೆ ಮೂಲಸೌಕರ್ಯ ವೃದ್ಧಿಗೆ ಭಾರತವು ಎರಡನೇ ಕಂತಾದ ₹ 500 ಕೋಟಿಯನ್ನು ಭೂತಾನ್‌ಗೆ ಬಿಡುಗಡೆ ಮಾಡಿದೆ.

              ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 23ರಂದು ಭೂತಾನ್‌ಗೆ ಎರಡು ದಿನಗಳ ಭೇಟಿ ನೀಡಿದ್ದ ವೇಳೆ, ಹಿಮಾಲಯ ದೇಶದ ಅಭಿವೃದ್ಧಿಗಾಗಿ ಮುಂದಿನ ಐದು ವರ್ಷಗಳಲ್ಲಿ ₹ 10,000 ಕೋಟಿ ನೆರವು ನೀಡುವುದಾಗಿ ಘೋಷಣೆ ಮಾಡಿದ್ದರು.

              ಅದಾದ ವಾರದಲ್ಲಿಯೇ ದೆಹಲಿಯಿಂದ ಎರಡನೇ ಕಂತಿನ ಹಣ ಬಿಡುಗಡೆ ಆಗಿದೆ. ಈ ವರ್ಷದ ಜನವರಿ 28ರಂದು ಮೊದಲ ಕಂತಾದ ₹ 500 ಕೋಟಿ ಬಿಡುಗಡೆ ಮಾಡಲಾಗಿತ್ತು.

                  ಭೂತಾನ್‌ನಲ್ಲಿರುವ ಭಾರತದ ರಾಯಭಾರಿ ಸುಧಾಕರ್‌ ದಲೇಲಾ ಅವರು, ಭೂತಾನ್‌ ವಿದೇಶಾಂಗ ವ್ಯವಹಾರಗಳ ಸಚಿವ ಲಿಯಾನ್‌ಪೋ ಡಿ.ಎನ್‌. ಧುಂಗ್ಯೆಲ್‌ ಅವರಿಗೆ ಎರಡನೇ ಕಂತಿನ ಮೊತ್ತವನ್ನು ಹಸ್ತಾಂತರಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries