ವಯನಾಡು: ಪೂಕೋಡ್ ಪಶುವೈದ್ಯಕೀಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ ಸಿದ್ಧಾರ್ಥ್ ಸಾವಿನ ಪ್ರಕರಣದ ಆರು ಪ್ರಮುಖ ಆರೋಪಿಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಸಿಂಜೋ ಜಾನ್ಸನ್, ಅಮೀರ್ ಅಕ್ಬರಲಿ, ಸೌದ್, ಆದಿತ್ಯನ್, ಕಾಶಿನಾಥನ್ ಮತ್ತು ಡ್ಯಾನಿಶ್ ಅವರನ್ನು ಎರಡು ದಿನಗಳ ಪೋಲೀಸ್ ವಶಕ್ಕೆ ಬಿಡುಗಡೆ ಮಾಡಲಾಗಿದೆ.
ಸಿದ್ಧಾರ್ಥ್ ಸಾವಿಗೆ ಸಂಬಂಧಿಸಿದಂತೆ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಥಳಿಸಲು ಬಳಸಿದ ಶಸ್ತ್ರಾಸ್ತ್ರಗಳನ್ನು ಸ್ಪಷ್ಟಪಡಿಸಲು ಅವರನ್ನು ಕಸ್ಟಡಿಗೆ ನೀಡಲಾಗಿದೆ. ಸಿಂಜೊ ಮತ್ತು ಕಾಶಿನಾಥನ್ ಎಂಬುವರು ಸಿದ್ಧಾರ್ಥ್ ನನ್ನು ಅಮಾನುಷವಾಗಿ ಥಳಿಸಿದ್ದಾರೆ ಎಂದು ಪೋಲೀಸರು ಕಂಡುಕೊಂಡಿದ್ದಾರೆ. ಇದರ ಬೆನ್ನಲ್ಲೇ ತನಿಖಾ ತಂಡವು ಆರೋಪಿಗಳ ಪೋನ್‍ಗಳ ಪೊರೆನ್ಸಿಕ್ ಪರೀಕ್ಷೆ ಮತ್ತು ಸೆಲ್ಲೋಫೇನ್ ಪರೀಕ್ಷೆಯಂತಹ ತಜ್ಞರ ಪರೀಕ್ಷೆಗಳನ್ನು ನಡೆಸಲು ನ್ಯಾಯಾಲಯದ ಮೊರೆ ಹೋಗಲಿದೆ.
ಈ ಮಧ್ಯೆ ಸಿದ್ಧಾರ್ಥ್ ನಿಧನದಿಂದ ಮುಚ್ಚಲಾದ ಪೂಕೊಡೆ ಪಶುವೈದ್ಯಕೀಯ ಕಾಲೇಜು ಮೊನ್ನೆಯಿಂದ ತರಗತಿಗಳನ್ನು ಪುನರಾರಂಭಿಸಿದೆ. ಕ್ಯಾಂಪಸ್‍ನಲ್ಲಿ ಭದ್ರತೆಯನ್ನು ಬಲಪಡಿಸಲು ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾಲೇಜು ಅಧಿಕಾರಿಗಳು ಮಾಹಿತಿ ನೀಡಿದರು.





