HEALTH TIPS

60,000ಕ್ಕೂ ಹೆಚ್ಚು ಪೋಸ್ಟರ್‌ಗಳು, ಬ್ಯಾನರ್‌ಗಳನ್ನು ತೆರವುಗೊಳಿಸಿದ MCD

            ವದೆಹಲಿ: 2024ರ ಲೋಕಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ದೆಹಲಿ ಮಹಾನಗರ ಪಾಲಿಕೆಯು ನಗರದ 12 ವಲಯಗಳಲ್ಲಿ ಒಟ್ಟು 60,587 ಪೋಸ್ಟರ್‌ಗಳು, ಬ್ಯಾನರ್‌ಗಳು, ಹೋರ್ಡಿಂಗ್‌ಗಳು ಮತ್ತು ಸಣ್ಣ ಬೋರ್ಡ್‌ಗಳನ್ನು ತೆರವುಗೊಳಿಸಿದೆ.

            ಶಹದಾರ ಉತ್ತರ ವಲಯದಿಂದ ಅತಿ ಹೆಚ್ಚು ಪೋಸ್ಟರ್‌ಗಳನ್ನು (12,143) ಮಹಾನಗರ ಪಾಲಿಕೆಯು ತೆರವುಗೊಳಿಸಿದೆ. ಶಹದಾರ ದಕ್ಷಿಣ ವಲಯದಿಂದ 11,680 ಮತ್ತು ದಕ್ಷಿಣ ವಲಯದಿಂದ 4,359 ಪೋಸ್ಟರ್‌ಗಳನ್ನು ತೆರವುಗೊಳಿಸಲಾಗಿದೆ.

             2024ರ ಲೋಕಸಭೆ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಶನಿವಾರ (ಮಾರ್ಚ್ 16) ಪ್ರಕಟಿಸಿದೆ. ಮಾದರಿ ನೀತಿ ಸಂಹಿತೆ ತಕ್ಷಣದಿಂದ ಜಾರಿಗೆ ಬಂದಿದ್ದು, ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೆ ಜಾರಿಯಲ್ಲಿರುತ್ತದೆ.

             ವಲಯವಾರು ಏಕೀಕೃತ ವರದಿಯ ಪ್ರಕಾರ, ದೆಹಲಿ ಮಹಾನಗರ ಪಾಲಿಕೆಯು (ಎಂಸಿಡಿ) ಭಾನುವಾರದವರೆಗೆ ತನ್ನ 12 ವಲಯಗಳಲ್ಲಿ ಒಟ್ಟು 44,550 ಪೋಸ್ಟರ್‌ಗಳು, 7,117 ಹೋರ್ಡಿಂಗ್‌ಗಳು, 4,939 ಬ್ಯಾನರ್‌ಗಳು ಮತ್ತು 3,981 ಸಣ್ಣ ಬೋರ್ಡ್‌ಗಳನ್ನು ತೆಗೆದುಹಾಕಿದೆ.

ಎಲ್ಲಾ ಗೋಡೆ ಬರಹದ ಪೋಸ್ಟರ್‌ಗಳು/ಪೇಪರ್‌ಗಳು ಅಥವಾ ಇನ್ನಾವುದೇ ರೂಪದ ಕಟಿಂಗ್/ಹೋರ್ಡಿಂಗ್ ಬ್ಯಾನರ್‌ಗಳು, ಧ್ವಜಗಳು ಇತ್ಯಾದಿಗಳನ್ನು ತೆಗೆದುಹಾಕಲಾಗಿದೆ ಎಂದು ವರದಿ ತಿಳಿಸಿದೆ.

                 ಚುನಾವಣೆ ನಿಯಮಗಳ ಪ್ರಕಾರ, ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರನ್ನು ಪ್ರಚಾರ ಮಾಡುವ ಯಾವುದೇ ರೀತಿಯ ಪೋಸ್ಟರ್, ಹೋರ್ಡಿಂಗ್ ಅಥವಾ ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಅನ್ನು ಚುನಾವಣಾ ವೇಳಾಪಟ್ಟಿ ಘೋಷಣೆಯಾದ 24 ತಾಸಿನಲ್ಲಿ ತೆಗೆದುಹಾಕಬೇಕು.

              ರೋಹಿಣಿ ವಲಯ, ನಗರ ಎಸ್‌ಪಿ ವಲಯ, ಸಿವಿಲ್ ಲೈನ್ಸ್ ವಲಯ, ಕರೋಲ್ ಬಾಗ್ ವಲಯ, ನರೇಲಾ ವಲಯ, ಕೇಶವಪುರಂ ವಲಯ, ದಕ್ಷಿಣ ವಲಯ, ಪಶ್ಚಿಮ ವಲಯ, ನಜಾಫ್‌ಗಢ ವಲಯ, ಕೇಂದ್ರ ವಲಯ, ಶಹದಾರ ಉತ್ತರ ವಲಯ ಮತ್ತು ಶಹದಾರ ದಕ್ಷಿಣ ವಲಯಗಳನ್ನು ಒಳಗೊಂಡಂತೆ 12 ವಲಯಗಳನ್ನು ದೆಹಲಿ ಮಹಾನಗರ ಪಾಲಿಕೆ ಹೊಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries