HEALTH TIPS

ಸಹಕಾರಿ ಬ್ಯಾಂಕ್ ಠೇವಣಿ ಬಡ್ಡಿ ದರದಲ್ಲಿ ಬದಲಾವಣೆ, ಹಿರಿಯ ನಾಗರಿಕರಿಗೆ ಶೇ.8.75 ಬಡ್ಡಿ..ಮಾಹಿತಿಗಳು ಇಲ್ಲಿವೆ

               ತಿರುವನಂತಪುರ: ಸಹಕಾರಿ ಕ್ಷೇತ್ರದಲ್ಲಿ ಹೂಡಿಕೆ ಮೇಲಿನ ಬಡ್ಡಿ ದರದಲ್ಲಿ ಬದಲಾವಣೆ ಮಾಡಲಾಗಿದೆ. ಸಹಕಾರ ಸಚಿವ ವಿ.ಎನ್.ವಾಸವನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಡ್ಡಿದರ ನಿರ್ಣಯ ಕುರಿತ ಉನ್ನತ ಮಟ್ಟದ ಸಭೆಯು ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದೆ.

                ಸಹಕಾರಿ ಬ್ಯಾಂಕ್‍ಗಳ ಠೇವಣಿದಾರರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಮತ್ತು ಇತರ ಬ್ಯಾಂಕ್‍ಗಳಿಗಿಂತ ಹೆಚ್ಚಿನ ಬಡ್ಡಿ ಸಿಗುವ ರೀತಿಯಲ್ಲಿ ಬಡ್ಡಿದರವನ್ನು ನಿಗದಿಪಡಿಸಲಾಗಿದೆ.

                ಪ್ರಾಥಮಿಕ ಸಹಕಾರ ಸಂಘಗಳಲ್ಲಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಬದಲಾಯಿಸಲಾಗಿದೆ. ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆಗಳ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಕೇರಳ ಬ್ಯಾಂಕ್‍ನಲ್ಲಿ ಎರಡು ವರ್ಷಕ್ಕಿಂತ ಕಡಿಮೆ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಸ್ಥಿರ ಠೇವಣಿಗಳ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೇರಳ ಬ್ಯಾಂಕ್ ಪ್ರಾಥಮಿಕ ಸಹಕಾರ ಸಂಘಗಳಿಂದ ಪಡೆದ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಠೇವಣಿ ಅವಧಿಯಲ್ಲಿ ಮಾಡಿದ ಠೇವಣಿಗಳು ಆ ಸಮಯದಲ್ಲಿ ಪಾವತಿಸಿದ ಬಡ್ಡಿಯನ್ನು ಗಳಿಸುತ್ತಲೇ ಇರುತ್ತವೆ. ಪರಿಷ್ಕøತ ದರಗಳು ಮೊನ್ನೆಯಿಂದಲೇ ಜಾರಿಗೆ ಬಂದಿವೆ. ಪ್ರಾಥಮಿಕ ಸಹಕಾರಿ ಬ್ಯಾಂಕ್‍ಗಳಲ್ಲಿ ಹಿರಿಯ ನಾಗರಿಕರ ಠೇವಣಿಗಳಿಗೆ ಗರಿಷ್ಠ ಶೇ.8.75ರಷ್ಟು ಬಡ್ಡಿ ದೊರೆಯಲಿದೆ.

            ರಾಜ್ಯ ಸಹಕಾರ ಯೂನಿಯನ್ ಅಧ್ಯಕ್ಷ ಕೊಲಿಯಕೋಟ್ ಕೃಷ್ಣನ್ ನಾಯರ್, ಸಹಕಾರ ಇಲಾಖೆ ಕಾರ್ಯದರ್ಶಿ ಮಿನಿ ಆಂಟನಿ ಐಎಎಸ್, ಸಹಕಾರ ನಿಬಂಧಕ ಟಿ.ವಿ.ಸುಭಾಷ್ ಐ.ಎ.ಎಸ್, ಕೇರಳ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಸಿ.ಸಹದೇವ, ಪಿಎಎಕ್ಸ್ ಸಂಘದ ಕಾರ್ಯದರ್ಶಿ ಪಿ.ಪಿ.ದಾಮೋದರನ್, ಪಿಎಎಕ್ಸ್ ಬಡ್ಡಿ ನಿರ್ಣಯ ಸಮಿತಿ ಸಭೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಅಡ್ವ: ಎಂ.ಸಿ.ಬಿನುಕುಮಾರ್ ಭಾಗವಹಿಸಿದ್ದರು.

ಪ್ರಾಥಮಿಕ ಸಹಕಾರ ಸಂಘಗಳಲ್ಲಿನ ಠೇವಣಿಗಳ ಮೇಲಿನ ಬಡ್ಡಿದರ ಪರಿಷ್ಕೃತ

• 15 ದಿನಗಳಿಂದ 45 ದಿನಗಳವರೆಗೆ 6%.

• 46 ದಿನಗಳಿಂದ 90 ದಿನಗಳವರೆಗೆ 6.50%.

• 91 ದಿನಗಳಿಂದ 179 ದಿನಗಳವರೆಗೆ 7.25%.

• 180 ದಿನಗಳಿಂದ 364 ದಿನಗಳವರೆಗೆ 7.50%.

• ಒಂದು ವರ್ಷದಿಂದ ಎರಡು ವರ್ಷಗಳವರೆಗೆ 8.25%.

• ಎರಡು ವರ್ಷಗಳಿಗಿಂತ ಹೆಚ್ಚು ಕಾಲ 8%.

(50% (1/2 ಅರ್ಧ ಶೇಕಡಾ) ಬಡ್ಡಿಯನ್ನು ಹಿರಿಯ ನಾಗರಿಕರ ಸ್ಥಿರ ಠೇವಣಿಗಳ ಮೇಲೆ ಸೇರಿಸಲಾಗುತ್ತದೆ)

ಕೇರಳ ಬ್ಯಾಂಕ್‍ನಲ್ಲಿನ ವೈಯಕ್ತಿಕ ಠೇವಣಿಗಳ ಮೇಲಿನ ಬಡ್ಡಿದರ ಪರಿಷ್ಕೃತ

• 15 ದಿನಗಳಿಂದ 45 ದಿನಗಳವರೆಗೆ 5.50%.

• 46 ದಿನಗಳಿಂದ 90 ದಿನಗಳವರೆಗೆ 6%.

• 91 ದಿನಗಳಿಂದ 179 ದಿನಗಳವರೆಗೆ 6.25%.

• 180 ದಿನಗಳಿಂದ 364 ದಿನಗಳವರೆಗೆ 7%.

• ಒಂದು ವಷರ್Àದಿಂದ ಎರಡು ವಷರ್Àಗಳವರೆಗೆ 8%.

• ಎರಡು ವರ್ಷಗಳಿಗಿಂತ ಹೆಚ್ಚು ಕಾಲ 7.75%.

ಪ್ರಾಥಮಿಕ ಸಹಕಾರ ಸಂಘಗಳಲ್ಲಿನ ಠೇವಣಿಗಳ ಮೇಲಿನ ಹಳೆಯ ಬಡ್ಡಿ ದರ

• 15 ದಿನಗಳಿಂದ 45 ದಿನಗಳವರೆಗೆ 6%.

• 46 ದಿನಗಳಿಂದ 90 ದಿನಗಳವರೆಗೆ 6.50%.

• 91 ದಿನಗಳಿಂದ 179 ದಿನಗಳವರೆಗೆ 7.50%.

• 180 ದಿನಗಳಿಂದ 364 ದಿನಗಳವರೆಗೆ 7.75%.

• ಒಂದು ವರ್ಷದಿಂದ ಎರಡು ವರ್ಷಗಳವರೆಗೆ 9%.

• ಎರಡು ವಷರ್Àಗಳಿಗಿಂತ ಹೆಚ್ಚಿನ ಠೇವಣಿಗಳಿಗೆ 8.75%.

ಕೇರಳ ಬ್ಯಾಂಕ್‍ನಲ್ಲಿನ ವೈಯಕ್ತಿಕ ಠೇವಣಿಗಳ ಮೇಲಿನ ಹಳೆಯ ಬಡ್ಡಿ ದರ

• 15 ದಿನಗಳಿಂದ 45 ದಿನಗಳವರೆಗೆ 5.50%.

• 46 ದಿನಗಳಿಂದ 90 ದಿನಗಳವರೆಗೆ 6%.

• 91 ದಿನಗಳಿಂದ 179 ದಿನಗಳವರೆಗೆ 6.75%.

• 180 ದಿನಗಳಿಂದ 364 ದಿನಗಳವರೆಗೆ 7.25%.

• ಒಂದು ವರ್ಷದಿಂದ ಎರಡು ವರ್ಷಗಳವರೆಗೆ 8%.

• ಎರಡು ವರ್ಷಗಳಿಗಿಂತ ಹೆಚ್ಚಿನ ಠೇವಣಿಗಳಿಗೆ 7.75%.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries