HEALTH TIPS

ನಾಡಿನ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರ : ಶಾಸಕ ಅಶ್ರಫ್

               ಕುಂಬಳೆ: ಒಂದು ಪ್ರದೇಶದ ಅಭಿವೃದ್ಧಿಯಲ್ಲಿ ಅಲ್ಲಿನ ಸಂಘ-ಸಂಸ್ಥೆಗಳ ಪಾತ್ರ ಮಹತ್ತರವಾದುದೆಂದು ಮಂಜೇಶ್ವರ ಶಾಸಕ ಎ. ಕೆ. ಎಂ. ಅಶ್ರಫ್ ಅಭಿಪ್ರಾಯಪಟ್ಟರು.

             ಸೀತಾಂಗೋಳಿ ಸಂತೋಷ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ಬಿನ ಆಶ್ರಯದಲ್ಲಿ ಸೀತಾಂಗೋಳಿಯಲ್ಲಿ ಜರಗಿದ ಸಾಮೂಹಿಕ ಇಫ್ತಾರ್ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

                ನಾಡೊಂದು ಅಭಿವೃದ್ಧಿ ಕಾಣಲು, ಜನರಲ್ಲಿ ಪರಸ್ಪರ ಸೌಹಾರ್ದ, ಸಹೋದರತೆ ಮನೋಭಾವ ಬೆಳೆಯಲು ಆ ಪ್ರದೇಶದ ಸಾಮಾಜಿಕ ಸಂಘಟನೆಗಳ ಕೊಡುಗೆ ಅತೀ ಮುಖ್ಯ. ಈ ನಿಟ್ಟಿನಲ್ಲಿ ಸೀತಾಂಗೋಳಿ ಪ್ರದೇಶದ ಸಾಮಾಜಿಕ, ಸಾಂಸ್ಕøತಿಕ ಉನ್ನತಿಯಲ್ಲಿ ಸಂತೋಷ್ ಕ್ಲಬ್ಬಿನ ಸೇವೆ ನಿಜಕ್ಕೂ ಅನುಪಮವಾದುದು. 50 ವರ್ಷಗಳ ಇತಿಹಾಸವುಳ್ಳ ಈ ಸಂಘಟನೆಯು ನಾಡಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಇದು ಎಲ್ಲ ಸೇವಾ ಸಂಘಟನೆಗಳು ಅನುಕರಿಸಬೇಕಾದ ಮಾದರಿಯಾಗಿದೆ ಎಂದರು. 

              ಕಾರ್ಯಕ್ರಮದಲ್ಲಿ ಸಂತೋಷ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ಬಿನ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿ'ಸೋಜಾ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಝೆಡ್. ಎ. ಕಯ್ಯಾರ್ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಇ ಕೆ. ಮುಹಮ್ಮದ್ ಕುಞ, ಸುಕುಮಾರ ಕುದ್ರೆಪ್ಪಾಡಿ, ಜಯಂತ ಪಾಟಾಳಿ, ಕ್ಲಬ್ಬಿನ ಉಪಾಧ್ಯಕ್ಷ ಪೃಥ್ವಿರಾಜ್, ಕಲಾ ಕಾರ್ಯದರ್ಶಿ ಶೋಭಿತ್ ಪ್ರಶಾಂತ್, ಮನೋಜ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಭಿಜಿತ್ ಸ್ವಾಗತಿಸಿ, ಮಹಾಲಿಂಗ ಪಾಟಾಳಿ ವಂದಿಸಿದರು. ಈ ಸಂದರ್ಭದಲ್ಲಿ ಶಾಸಕ ಎ. ಕೆ. ಎಂ. ಅಶ್ರಫ್ ಹಾಗೂ ಝೆಡ್. ಎ. ಕಯ್ಯಾರ್ ಅವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು.

            ಬಳಿಕ ನಡೆದ ಸಾಮೂಹಿಕ ಇಫ್ತಾರ್ ಸಂಗಮದಲ್ಲಿ ಸುಮಾರು 200 ರಷ್ಟು ಮಂದಿ ಭಾಗವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries